Rohingya | ನಿರಾಶ್ರಿತರಿಗೆ ಭಾರತದಲ್ಲಿ ಮನೆ ಭಾಗ್ಯ
ರೋಹಿಂಗ್ಯಾ ನಿರಾಶ್ರಿತರನ್ನು ಫ್ಲಾಟ್ಗಳಿಗೆ ಸ್ಥಳಾಂತರ
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶ್ಲಾಘನೆ
ದೆಹಲಿಯ ಬಕ್ಕರ್ ವಾಲಾದಲ್ಲಿರುವ ಫ್ಲಾಟ್ ಗಳು
ಮೂಲಭೂತ ಸೌಕರ್ಯಗಳ ಜೊತೆಗೆ ಖಾಕಿ ಭದ್ರತೆ
ಹೊಸದಿಲ್ಲಿ: ಟೆಂಟ್ಗಳಲ್ಲಿ ನೆಲೆಸಿರುವ ರೋಹಿಂಗ್ಯಾ ನಿರಾಶ್ರಿತರನ್ನು ಮೂಲ ಸೌಕರ್ಯಗಳು ಮತ್ತು ಹಗಲು-ರಾತ್ರಿ ಭದ್ರತೆ ಹೊಂದಿರುವ ಫ್ಲಾಟ್ಗಳಿಗೆ ಸ್ಥಳಾಂತರಿಸಲು ಕೇಂದ್ರ ಸರಕಾರ ಮುಂದಾಗಿದೆ.
ಈ ನಿರ್ಧಾರವನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಶ್ಲಾಘಿಸಿದ್ದಾರೆ.
ದೇಶದಲ್ಲಿ ಆಶ್ರಯ ಪಡೆದಿರುವವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ ಮತ್ತು ಈ ಕ್ರಮವನ್ನು ಮಹತ್ವದ ನಿರ್ಧಾರ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಆಶ್ರಯ ಪಡೆದಿರುವವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಇದು ಮಹತ್ತರವಾದ ನಿರ್ಧಾರವಾಗಿದೆ.
ದೆಹಲಿಯ ಬಕ್ಕರ್ ವಾಲಾದಲ್ಲಿರುವ EWS ಫ್ಲಾಟ್ ಗಳಿಗೆ ರೋಹಿಂಗ್ಯಗಳನ್ನು ಶಿಫ್ಟ್ ಮಾಡಲಾಗುತ್ತದೆ.
ಅಲ್ಲಿ ಅವರಿಗೆ ಮೂಲಭೂತ ಸೌಕರ್ಯ ಜೊತೆಗೆ ಪೊಲೀಸ್ ಭದ್ರತೆ ಕೂಡ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ರೊಹಿಂಗ್ಯಾಗಳಿಗೆ ವಸತಿ ವ್ಯವಸ್ಥೆ ಕುರಿತು ಉನ್ನತ ಮಟ್ಟದ ಸಭೆ ನಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ದೆಹಲಿಯ ಮುಖ್ಯ ಕಾರ್ಯದರ್ಶಿ ವಹಿಸಿದ್ದರು ಮತ್ತು ದೆಹಲಿ ಸರ್ಕಾರ, ದೆಹಲಿ ಪೊಲೀಸ್ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.