Bagalkote | ಸ್ಮಶಾನಕ್ಕೆ ಸ್ಥಳ ಕೊಡಿ ಎಂದು ರಸ್ತೆಗಳಿದ ಸಿಗಿಕೇರಿ ಜನ
ಬಾಗಲಕೋಟೆ : ಅಂತ್ಯಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿಗಿಕೇರಿ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದಾರೆ.
ಸಿಗಿಕೇರಿ ಗ್ರಾಮದ ಜಮೀನುಗಳನ್ನು ಈಗಾಗಲೇ ಮೂರನೇ ಹಂತದ ನಿವೇಶನ ಹಂಚಿಕೆ ಮಾಡಲು ಬಿಟಿಡಿಎಯವ್ರು(ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ವಶಪಡಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ಸತ್ತವರನ್ನು ಹೂಳಲು ಜಾಗವಿಲ್ಲ, ಈ ಬಗ್ಗೆ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಎಷ್ಟೇ ಮನವಿ ಮಾಡಿದ್ರು ಸ್ಪಂದಿಸಿಲ್ಲ.
ಹೀಗಾಗಿ ನಾವು ಹೋರಾಟಕ್ಕಿಳ್ಳಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸಿಗಿಕೇರಿ ಗ್ರಾಮದಲ್ಲಿಂದು ಇಬ್ಬರು ಸಾವನ್ನಪ್ಪಿದ್ದಾರೆ. ಸಾವನಪ್ಪಿದವರನ್ನು ಹೂಳಲು ಜಾಗವಿಲ್ಲ, ಊರಿಗೆ ಸ್ಮಾಶನವಿಲ್ಲ ಅವರನ್ನು ಎಲ್ಲಿ ಮಣ್ಣು ಮಾಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಇನ್ನು ಸ್ಥಳಕ್ಕೆ ಬಾಗಲಕೋಟೆ ನಗರ ಸಿಪಿಐ ಸೂರಿ ಭೇಟಿ ನೀಡಿದ್ದಾರೆ.