ಬ್ರಿಟನ್ ಪ್ರಧಾನಿ ರೇಸ್ ನಲ್ಲಿ ರಿಷಿ ಸುನಕ್ ಗೆ ಹಿನ್ನಡೆ…
ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ ನಲ್ಲಿ ರಿಷಿ ಸುನಕ್ ಗೆ ಹಿನ್ನಡೆಯಾಗಿದೆ. ಬೋರಿಸ್ ಜಾನ್ಸನ್ ನಂತರ ಲಿಜ್ ಟ್ರಸ್ ಪ್ರಧಾನಿಯಾಗುವ ಸಾಧ್ಯತೆಯಿದೆ. ಕನ್ಸರ್ವೇಟಿವ್ ಪಕ್ಷದ ವೆಬ್‌ಸೈಟ್ ಕನ್ಸರ್ವೇಟಿವ್ ಹೋಮ್ ನಡೆಸಿದ ಸಮೀಕ್ಷೆಯಲ್ಲಿ, ಆ ಪಕ್ಷದ ಬಹುತೇಕ ಸದಸ್ಯರು ಲಿಜ್ ಪರವಾಗಿ ನಿಂತಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಪಕ್ಷದ 961 ಸದಸ್ಯರು ಭಾಗವಹಿಸಿದ್ದರು. 60% ಜನರು ಲಿಜ್ ಟ್ರಸ್ ಪರವಾಗಿದ್ದಾರೆ. 28 % ಜನರು ಮಾತ್ರ ರಿಷಿ ಸುನಕ್ ಅವರನ್ನ ಬೆಂಬಲಿಸಿದ್ದಾರೆ. ಆಗಸ್ಟ್ 4 ರಂದು ನಡೆಸಿದ ಸಮೀಕ್ಷೆಯಲ್ಲಿ ಲಿಜ್ 32 ಅಂಕಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಬಹುಪಾಲು ಜನರು ಲಿಜ್ ಟ್ರಸ್ ಅವರನ್ನು ಮುಂದಿನ ನಾಯಕ ಮತ್ತು ಪ್ರಧಾನ ಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂದು ಕನ್ಸರ್ವೇಟಿವ್ ಹೋಮ್ ವೆಬ್‌ಸೈಟ್ ಬುಧವಾರ ಹೇಳಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿಕ್ರಿಯಿಸಿದವರಲ್ಲಿ ಕೇವಲ 9 % ಸದಸ್ಯರು ತಾವು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ. ಆದರೆ ಸುಮಾರು 60 % ಜನರು ಈಗಾಗಲೇ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಆದರೇ ಇನ್ನೂ 40 % ಜನರು ಮತದಾನ ಮಾಡಬೇಕಾಗಿದೆ. ಸೆಪ್ಟೆಂಬರ್ 5 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಗೆದ್ದವರು ಅಂದು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.