ರಾಯಚೂರು ತೆಲಂಗಾಣಕ್ಕೆ ವಿಲೀನ!?
ತೆಲಂಗಾಣ ಸಿಎಂ ಚಂದ್ರಶೇಖರ್ ಹೇಳಿಕೆ
ತೆಲಂಗಾಣಕ್ಕೆ ರಾಯಚೂರು ವಿಲೀನಕ್ಕೆ ಒತ್ತಾಯ
ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ
ವಿಕಾರಾಬಾದ್ ನಲ್ಲಿ ಚಂದ್ರಶೇಖರ್ ರಾವ್ ಹೇಳಿಕೆ
ಹೈದರಾಬಾದ್ : ಟಿಆರ್ ಎಸ್ ಸರ್ಕಾರದ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ತೆಲಂಗಾಣದ ಹೊಸ ಜಿಲ್ಲೆ ವಿಕಾರಾಬಾದ್ ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ಕೆಸಿಆರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಚಂದ್ರಶೇಖರ್ ರಾವ್, ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಗಡಿ ಪ್ರದೇಶವಾದ ತಾಂಡೂರಿಗೆ ನೀವು ಹತ್ತಿರದ್ದಲ್ಲಿದ್ದೀರಿ.
ರಾಯಚೂರಿನ ಕೆಲವು ಗಡಿ ಭಾಗದ ಜನರು ತಮ್ಮನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಿ ಎಂದು ಒತ್ತಾಯಿಸುತ್ತಿದ್ದಾರೆ.
ಅವರು ಟಿಆರ್ ಎಸ್ ಸರ್ಕಾರದ ತಂದಿರುವ ಯೋಜನೆಗಳಿಂದ ಆಕರ್ಷಿತರಾಗಿದ್ದಾರೆ. ಹೀಗಾಗಿ ಇಲ್ಲಿ ತಂದಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಒದಗಿಸಬೇಕು ಎಂದು ರಾಯಚೂರಿನ ಜನರು ಒತ್ತಾಯಿಸುತ್ತಿದ್ದಾರೆ ಎಂದು ಕೆಸಿಆರ್ ಹೇಳಿದ್ದಾರೆ.
ಅಂದಹಾಗೆ ಕೆ.ಚಂದ್ರಶೇಖರ್ ರಾವ್ ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆಯೂ ಇಂತಹ ಅನೇಕ ಹೇಳಿಕೆಗಳನ್ನು ನೀಡಿದ್ದರು.