Youtube Channel: ಭಾರತದ ಬಗ್ಗೆ ಅಪಪ್ರಚಾರ – 8 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಕೇಂದ್ರ…
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಕಾರಣಕ್ಕೆ 8 ಯೂಟ್ಯೂಬ್ ಚಾನೆಲ್ ಗಳನ್ನ ಮಾಹಿತಿ ಮತ್ತು ಪ್ರಸಾರ ನಿರ್ಬಂಧಿಸಿದೆ. ಇವುಗಳಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಸೇರಿದೆ. ಐಟಿ ಕಾಯ್ದೆ 2021 ರ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ಬ್ಯಾನ್ ಮಾಡಲಾದ ಚಾನೆಲ್ ಗಳನ್ನ 114 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 85 ಲಕ್ಷ 73 ಸಾವಿರ ಫಾಲೋದಾರರನ್ನೂ ಹೊಂದಿದೆ. ಸಚಿವಾಲಯದ ಪ್ರಕಾರ, ಈ ಚಾನೆಲ್‌ಗಳಲ್ಲಿ ನಕಲಿ ಮತ್ತು ಭಾರತ ವಿರೋಧಿ ವಿಷಯಗಳನ್ನ ಬಿತ್ತರಿಸಲಾಗುತ್ತಿತ್ತು.
ಬ್ಯಾನ್ ಮಾಡಲಾದ ಚಾನಲ್‌ಗಳ ಹೆಸರು ಇಂತಿವೆ..
ಸಚಿವಾಲಯ ನಿಷೇಧಿಸಿರುವ ಚಾನೆಲ್‌ಗಳಲ್ಲಿ ಡೆಮಾಕ್ರಸಿ ಟಿವಿ, U&V TV, AM ರಾಜ್ವಿ, ಗ್ಲೋರಿಯಸ್ ಪವನ್ ಮಿಥಿಲಾಂಚಲ್, ಸಿಟಾಪ್ 5TH, ಸರ್ಕಾರಿ ಅಪ್ಡೇಟ್, ಸಬ್ ಕುಚ್ ದೇಖೋ, ನ್ಯೂಸ್ ಕಿ ದುನಿಯಾ (ಪಾಕಿಸ್ತಾನಿ ಚಾನೆಲ್) ಸೇರಿವೆ. ಡೆಮಾಕ್ರಸಿ ಟಿವಿಯ ಫೇಸ್‌ಬುಕ್ ಪುಟವನ್ನು ಸಹ ನಿಷೇಧಿಸಲಾಗಿದೆ.
ಜುಲೈನಲ್ಲಿ ಕೇಂದ್ರ ಸರ್ಕಾರವು 78 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಆದೇಶಿಸಿತ್ತು. ಇದಕ್ಕೂ ಮುನ್ನ ಏಪ್ರಿಲ್ 5 ರಂದು ಐಬಿ ಸಚಿವಾಲಯ 22 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿತ್ತು. ಅವುಗಳಲ್ಲಿ 4 ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್‌ಗಳಿವೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಭಾರತೀಯರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಎಲ್ಲಾ ಜಾಲಗಳು ನಡೆಯುತ್ತಿವೆ. ಇವುಗಳಲ್ಲದೆ 3 ಟ್ವಿಟರ್ ಖಾತೆಗಳು, ಫೇಸ್ ಬುಕ್ ಖಾತೆ ಮತ್ತು ಸುದ್ದಿ ವೆಬ್ ಸೈಟ್ ಕೂಡ ಬ್ಲಾಕ್ ಆಗಿದೆ.








