Kodagu | ಸಿದ್ದು ವಿರುದ್ಧ #GOBACK ಅಭಿಯಾನ
ಕೊಡಗು : ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಭೇಟಿ ಹಿನ್ನಲೆ ಬಿಜೆಪಿ ಯುವ ಮೋರ್ಚಾದಿಂದ ಕೊಡಗಿನಲ್ಲಿ ನಲ್ಲಿ # GOBACK ಸಿದ್ದರಾಮಯ್ಯ ಅಭಿಯಾನ ಶುರುವಾಗಿದೆ.
“ಕೊಡಗಿಗೆ ಸಿದ್ಧುಖಾನ್ ಕೊಡಗಿಗೆ ಸೂತಕ” “ಕೊಡಗಿನಲ್ಲಿ ಹಿಂದುಗಳ ನರಮೇಧ ನಡೆಸಿದ ಟಿಪ್ಪುವಿನ ಶಿಶ್ಯ ಸಿದ್ಧು ಖಾನ್” # GOBACK ಎಂದು ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಭಿಯಾನ ನಡೆಸುತ್ತಿದೆ.

ಸಿದ್ದರಾಮಯ್ಯ ನವರು ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಭೇಟಿ ನೀಡಿದ್ದಾರೆ.
ಈ ನಡುವೆ ಕೊಡಗು ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಲಾಗಿದೆ.
ತಿತಿಮತಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ.
ಅಲ್ಲದೇ ಸಾವರ್ಕರ್ ಭಾವಚಿತ್ರ ಹಿಡಿದು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದ್ದಾರೆ.








