ಕಾಲ
ಕಾಲ…. ಮಾತುಗಾರರನ್ನೂ ಮೌನಿಯಾಗಿಸುತ್ತೆ,,, ಕೋಪಿಷ್ಟರಿಗೂ ತಾಳ್ಮೆ ಕಲಿಸುತ್ತೆ… ನಾನು ಕಲಿತೆ ಮಾತಾಡಿಯೂ ಮೌನವಾಗಿರುವುದನ್ನ , ಸಂದರ್ಭದಲ್ಲಿ ತಾಳ್ಮೆಯನ್ನ…
@@@@@@@@@@@@@@@@@
ಬದುಕಿನ ತಿರುವು
ಬದುಕಿನಲ್ಲಿ ಬರುವ ತಿರುವುಗಳು ಜೀವನದ ದಿಕ್ಕನ್ನೇ ಬದಲಾಯಿಸಿದಾಗ…
ಮನದಾಳದಲ್ಲಿ ಉದಯಿಸಿದ ಮಾತುಗಳ ಹೊರಹಾಕಲು ಭಯವಾಗಿ ಮನದಲೇ ಸಮಾಧಿಯಾದಾಗ…
ಗಟ್ಟಿಗಾರರಿಗೂ ಕಣ್ಣೀರು ಹಾಕಿಸಿ ಕಾಲ ತಮಾಷೆ ನೋಡಿದಾಗ….
ಒಮ್ಮೆಲೇ ಖುಷಿಗಳೆಲ್ಲವೂ ಮಾಯವಾಗಿ ,,, ನೋವಿನ ರುಚಿ ಅನಿಭವಿಸಿದಾಗ…
ಮನಸಲ್ಲೇ ಹೇಳಲಾಗದ ಮಾತುಗಳ ಅಡಗಿಸಿ ಕ್ಷಣಕ್ಷಣವೂ ಕೊರಗಿದಾಗ…
ಇತರರ ಖುಷಿಗಾಗಿ ನಮ್ಮ ಖುಷಿ ತ್ಯಾಗ ಮಾಡಿದಾಗ
ಆಗ….
ಆಗ…
ಜೀವನವೆಂದರೇನೆಂಬ ಸತ್ಯ ತಿಳಿಯುವುದಾಗ….
@@@@@@@@@@@@@@@@@@@@@@@@
ಮೌನ
ಮೌನವಾಗಿ ಅಳೋದನ್ನ ಕಲಿ..
ಮಾತನಾಡಿಯೂ ಮೌನವಾಗಿರೋದನ್ನ ಕಲಿ
ಸಂದರ್ಭ ಸರಿಯಿಲ್ಲದಾಗ ಮೌನಾಸ್ತ್ರದ ಪ್ರಯೋಗ ಕಲಿ…
ಮೌನ ಸಲ್ಲದ ಕಡೆ ಮಾತನಾಡೋದನ್ನ ಕಲಿ..
ಜನರ ಹಾಸ್ಯ , ನಿಂದನೆಗೂ ಮೌನವಾಗಿರೋದನ್ನ ಕಲಿ ..
ಮೌನವಾಗಿಯೇ ನೀನಂದುಕೊಂಡಿದ್ದನ್ನ ಸಾಧಿಸಲು ಕಲಿ…
ಮೌನವಾಗಿದ್ದಾಗ ನಿನ್ನ ಬೆನ್ನ ಹಿಂಧಿ ಮಾತನಾಡಿದವರಿಗೂ ನಗುವಿನ ಉತ್ತರ ನೀಡೋದನ್ನ ಕಲಿ ..
ಮಾತು ಶುರುಮಾಡಿದಾಗ ನಿನ್ನ ಎದುರಿಗೆ ನಿಂತವರನ್ನ ನೋಡಿ ನಗೋದನ್ನ ಕಲಿ..
ಸಮಸ್ಯೆ ಸಾವಿರ ಮೌನ ಎಲ್ಲದಕ್ಕಾ ಪರಿಹಾರ… ಈ ಸತ್ಯವನ್ನ ತಿಳಿ..
– ನಿಹಾರಿಕಾ ರಾವ್ –
@@@@@@@@@@@@@@@@@@@@@@
ಮುದ್ದು
ಮುದ್ದಾಗಿ ಕಾಣುವುದೆಲ್ಲವೂ ಇಷ್ಟವಾಗುತ್ತೆ…
ಎಲ್ಲವೂ ಬೇಕೆನಿಸುತ್ತೆ,,
ಹಾಗಂತ ಎಲ್ಲವನ್ನೂ ಬಿಗಿದಪ್ಪಿ ಮುದ್ದಾಡಲಾಗುತ್ತಾ..
ನನ್ನ ಕಣ್ ಗೆ ವಿಷ ಶರ್ಪವೂ ಎಷ್ಟೋ ಬಾರಿ ಮುದ್ದಾಗಿ ಕಂಡಿದ್ದುಂಟು ಮುದ್ದಾಡುವ ಆಸೆ ಆದ್ರೆ ಏನ್ ಮಾಡೋದು ಅದಕ್ಕಿಂತ ಹೆಚ್ಚು ಜೀವನದ ಮೇಲೆ ಆಸೆಯಿರುತ್ತೆ…
ಜೀವನದಲ್ಲಿ ಇಷ್ಟವಾಗೋ ಪ್ರತಿಯೊಂದೂ ನಮಗೆ ಒಳ್ಳೆಯದ್ದೇ ಆಗಬೇಕೆಂದಿಲ್ಲ… ಹೃದಯದಿಂದ ಇಷ್ಟ ಪಡೋದ್ರಿಂದ ನೋವೇ ಜಾಸ್ತಿ ಆಗತ್ತೆ…
@@@@@@@@@@@@@@@@@@@@@@
ಪಿಸು ಮಾತಿಗೆ ಉತ್ತರಿಸಲು ಹೆದರಿಕೆ
ನೀರವ ಮೌನದಲ್ಲೂ ಕೇಳುವ ಪಿಸು ಮಾತಿಗೆ ಉತ್ತರಿಸಲು ಹೆದರಿಕೆ ,,
ನೋಡೋ ಪ್ರತಿ ವಸ್ತುವಿನಲ್ಲೂ ಯಾವುದಾದರೂ ನೆಪದಲ್ಲಿ ನೆನಪಾಗುವವರ ಛವಿ ಕಣ್ಣೆದುರಿಗೆ ಬಂದರೆ ದರ್ಪಣದಲ್ಲಿ ಎನ್ನದೇ ಪ್ರತಿಬಿಂಬ ನೋಡಲು ಅಂಜಿಕೆ…
ಕಣ್ಣಂಚಲ್ಲಿ ನೀರು ಹರಿದರೂ ಮನಸ್ಸಿನಲ್ಲಿ ಹೇಳ ತೀರದ ಮಾತಿದ್ದರೂ ತುಟಿ ಬಿಚ್ಚಲು ಹೆದರಿಕೆ…
ಜೀವನವಿಷ್ಟೇ , ಯಾಕತಕ್ಕಾಗಿ ಬದುಕಬೇನಿಸಿದರೂ ಬದುಕಲೇಬೇಕಾದ ಅನಿವಾರ್ಯತೆ,,, ಸದಾ ನಗುತ್ತಿದ್ದವಳ ಮಂದಹಾಸ ಮಾಯ , ವಟವಟ ವಟಗುಡುತ್ತಿದ್ದಳು ಮೌನಿಯಾಗಿದ್ದೇಕೆ…? ಜನ ಕೇಳಿದಾಗ ನನ್ನ ನಾ ನೆನೆದಾಗ ನಾನೇನಾ ಇದು ಎಂಬ ಶಂಕೆ…
– ನಿಹಾರಿಕಾ ರಾವ್ –








