ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author special : ಅಂತರಾಳದ ಕಹಾನಿ – 7 : ಒಲವಲ್ಲಿ ಅವಳು – ಅವನು..!!! ಇಬ್ಬರ ಪಾತ್ರಗಳೇನು..??

Saakshatv Author special : ಅಂತರಾಳದ ಕಹಾನಿ – 7 : ( ಒಲವಲ್ಲಿ ಅವಳು – ಅವನು..!!! ಇಬ್ಬರ ಪಾತ್ರಗಳೇನು..?? by ನಿಹಾರಿಕಾ ರಾವ್ ) ಮಾರ್ಜಲ ಮಂಥನದಲ್ಲಿ ಅನುಭವಗಳ ಗುಚ್ಚ

Namratha Rao by Namratha Rao
August 19, 2022
in Marjala Manthana, Newsbeat, ಮಾರ್ಜಲ ಮಂಥನ
Saakshatv Author special , marjala manthana
Share on FacebookShare on TwitterShare on WhatsappShare on Telegram

ಒಲವಲ್ಲಿ ಅವಳು – ಅವನು

ಪ್ರೀತಿ… ನೋಡಿದ ತಕ್ಷಣ ಆಕರ್ಶಿತರಾಗುವುದನ್ನೇ ಪ್ರೀತಿ ಎನ್ನುವುದಾದರೆ ,, ಪ್ರತಿ ದಿನ ಪ್ರತಿ ಕ್ಷಣ ಒಬ್ಬೊಬ್ಬರ ಮೇಲೆ ನಮಗಾಗುವ ಸೆಳೆತ ಆಕರ್ಶಣೆಗೆ ಪ್ರೀತಿಯ ಹೆಸರಿಡಬೇಕಾಗುತ್ತದೆ…
ಪ್ರೀತಿ ಇಬ್ಬರ ಮನಸ್ಸನ್ನ ಬೆಸೆಯುವಂತಹದ್ದು… ಇಬ್ಬರ ಆತ್ಮಗಳ ನಡುವಿನ ಬಂಧನ…
ಪ್ರೀತಿಯಲ್ಲಿ ಹೆಣ್ಣು ಗಂಡು ತಮ್ಮ ತಮ್ಮ ಪಾತ್ರಗಳನ್ನೇ ನಿಭಾಯಿಸಬೇಕಾಗುತ್ತದೆ…
ಹಾಗೆಯೇ ಇಬ್ಬರೂ ನಿಭಾಯಿಸಬೇಕಾದ ಒಂದು ಬಹುಮುಖ್ಯವಾದ ಕರ್ತವ್ಯ ಅಂದ್ರೆ  ನಂಬಿಕೆ…
ಸಮಯ , ಸಂದರ್ಭ , ಪರಿಸ್ಥಿತಿ ಯಾವುದೇ ಇರಲಿ ಇಬ್ಬರೂ ಒಬ್ಬರನ್ನ ಒಬ್ಬರು ನಂಬುವುದು… ನಂಬಿಕೆಯ ದರ್ಪಣ ಎಲ್ಲಿಯವರೆಗೂ ಚೂರಾಗುವುದಿಲ್ಲವೋ ಅಲ್ಲಿಯವರೆಗೂ  ಪ್ರೀತಿಯ ಪಾವಿತ್ರ್ಯತೆ ,, ಅವರಿಬ್ಬರ ನಡುವಣ ಸಂಬಂಧಕ್ಕೆ ಎಳ್ಳಷ್ಟೂ ತೊಂದರೆಯಾಗುವುದಿಲ್ಲ…
ಅದಕ್ಕೆ ಈ ನಂಬಿಕೆಯನ್ನುವ ನಾಜೂಕಾದ ದರ್ಪಣವನ್ನ ಅವನು ಮತ್ತೆ ಅವಳು ಇಬ್ಬರೂ ಹುಷಾರಾಗಿ ಬಹಳ ನಾಜೂಕಾಗಿ , ನಿಷ್ಠೆಯಿಂದ ಜೋಪಾನ ಮಾಡಬೇಕಾಗುತ್ತದೆ..

Related posts

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

June 10, 2026
ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

June 10, 2026

ಅವನ ಪಾತ್ರವೇನು..?? 
ಒಂದು ಹುಡುಗಿ ಸಾಕಷ್ಟು ಆಸೆಗಳನ್ನ ಇಟ್ಟುಕೊಂಡಿರುತ್ತಾಳೆ..  ತನ್ನ ಹುಡುಗನ ಜೊತೆಗೆ ಹೇಗೆಲ್ಲಾ ಇರಬೇಕೆಂಬ ಕನಸುಗಳ  ಗೋಪುರವನ್ನೇ ಮನದಲ್ಲೇ ನಿರ್ಮಾಣ ಮಾಡಿಕೊಂಡಿರುತ್ತಾಳೆ… ಪ್ರತಿ ಕ್ಷಣ ತನ್ನ ಹುಡುಗನ ಒಂದು ಛವಿಗಾಗಿ ಕಾಯುತ್ತಿರುತ್ತಾಳೆ.. ಅವನ ನೆನಪಲ್ಲೇ ಕಾಯುತ್ತಿರುತ್ತಾಳೆ… ಜೀವನದಲ್ಲಿ ಅವನ ಜೊತೆಗೆ ಹೇಗೆಲ್ಲಾ ಇರಬೇಕೆಂಬ ಆಸೆಗಳ ಮಹಲನ್ನ ಕಟ್ಟಿಕೊಂಡು ಆ ಅರಮನೆಗೆ ಆಕೆ ರಾಣಿಯಾಗಿರುತ್ತಾಳೆ..

ಆ ರಾಣಿಯನ್ನ ಅರಮನೆಯಿಂದ ಹೊರಕರೆದುಕೊಂಡು ಬಂದು ತನ್ನ ಸವಾರಿ ಮೇಲೆ ಕೂರಿಸಿ ಹೊರಗಡೆ ಪ್ರಪಂಚ ಸುತ್ತಿಸುವ ರಾಜನ ಕನಸು ಆ ಹುಡುಗಿಯದ್ದು…

ಅರಮನೆಯೊಳಗೆ ವಜ್ರ ಕೊಟ್ಟು , ನಿತ್ಯವೂ ಹಬ್ಬದೂಟ ಬಡಿಸಿ , ಮೈತುಂಬ ಒಡವೆಗಳನ್ನ ಕೊಟ್ಟು ಲಕ್ಷ ಲಕ್ಷ ರೂಪಾಯಿಯ ಬಟ್ಟೆಗಳನ್ನ ಕೊಡಿಸಿ ಪಂಜರದೊಳಗಿನ ಗಿಣಿಯಂತೆ ಆಕೆಯನ್ನ ಕಾಪಾಡಿದರೆ , ಅವಳಿಗೆ ರಕ್ಷಣ ದೇಹಕ್ಕೆ ಸಿಗುತ್ತೆ ಹೊರತು ಮನಸ್ಸಿಗಲ್ಲ..

ಅವಳ ಆತ್ಮಕ್ಕೆ , ಮನಸ್ಸಿಗೆ ಆಗುವ ನೋವಿಗೆ ಯಾರು ಮುಲಾಮು ನೀಡ್ತಾರೆ… ಯಾರು ರಕ್ಷಣೆ ಮಾಡ್ತಾರೆ…
ಹೊರಗಡೆ ಅವನೂ ಅವಳ ಜೊತೆಗೆ ಪ್ರತಿ ಹೆಜ್ಜೆಯಲ್ಲೂ ಒಟ್ಟಿಗೆ ನಡೆಯಬೇಕು.. ಅವಳ ಕನಸಿಗೆ ರೆಕ್ಕೆಯಾಗಬೇಕು… ಅವಳ ಬೆನ್ನ ಹಿಂದೆ ನಾನಿದ್ದೀನಿ… ಪ್ರಪಂಚವೇ ಅವಳ ವಿರುದ್ಧ ತಿರುಗಿ ಬಿದ್ದರೂ ನಾನಿರುವೆ ,,,, ನಿನ್ನ ಕನಸಿಗೆ ಸಾವಿರ ಅಡಚಣೆ ಬಂದರೂ ಈಡೇರಿಸಲು ನಾನು ನಿನ್ನ ಬೆಂಬಲಿಸುವೆ … ಎಷ್ಟೇ ಜನರು , ಸಮಾಜ ನಿನ್ನ ವಿರುದ್ಧ ಮಾತನಾಡಲಿ , ನನಗೆ ನೀನೇನು ಗೊತ್ತಿದೆ… ತಲೆ ಕೆಡಿಸಿಕೊಳ್ಬೇಡ,.. ನೀನು ಏನೇನೆಲ್ಲಾ ಮಾಡಬೇಕೆಂದಿದೆಯೋ ಅದನ್ನೆಲ್ಲವ ಮಾಡು ,,, ನಿನ್ನ ಪರಿವಾರದವರು ಬೆಂಬಲಿಸಲಿ ಬಿಡಲಿ.. ನಾನಿರುವೆ ನಿನ್ನ ಜೊತೆಗೆ…

ಈ ಪಂಜರದ ಗಿಳಿ ಅಲ್ಲ,,, ಸ್ವಾತಂತ್ರ್ಯವಾಗಿ ಬದುಕುವ ಹಕ್ಕು ನಿನಗಿದೆ.. ನಿನ್ನ ಜೀವನ ನಿನ್ನಿಷ್ಟದಂತೆ ಜೀವಿಸುವ ಹಕ್ಕು ನಿನಗಿದೆ… ನಿನ್ನ ದೇಹಕ್ಕೆ ನಾನು ಹಕ್ಕುದಾರನಲ್ಲ… ನಿನ್ನ ಇಷ್ಟವಿಲ್ಲದೇ    ನಾನು ನಿನ್ನ ಮುಟ್ಟುವುದಿಲ್ಲ… ಮತ್ತೊಬ್ಬರಿಗೆ ನಿನ್ನ ದೇಹಕ್ಕಾಗಲೀ ಆತ್ಮಕ್ಕಾಗಲಿ ಮನಸ್ಸಿಗಾಗಲಿ ಹಾನಿ ಮಾಡುವುದಕ್ಕೂ ನಾನು ಬಿಡುವುದಿಲ್ಲ ಎಂದು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಬೇಕು ಅವನು ಅವಳನ್ನ.. ಫುಟ್ ಪಾತ್ ನಲ್ಲಿ ಊಟ ಮಾಡಿಸಿದ್ರೂ ಪ್ರೀತಿಯಿಂದ ಮಾಡಿಸಿದರೆ ಸಾಕು..

ತಂದೆಯಂತೆ ಅವಳ ಜವಾಬ್ದಾರಿ ತೆಗೆದುಕೊಂಡು , ಅವಳ ಮುಖದಲ್ಲಿ ನಗು ತರಿಸಲು ಪ್ರಯತ್ನಿಸಬೇಕು.. ಅವಳನ್ನ ಮಗುವಿನಂತೆಯೂ ನೇವರಿಸಿ , ಅವಳ ಜೊತೆಗೆ ಅವಳಿಗೆ ಅಗತ್ಯವಿದ್ದಾಗ ಸಮಯ ಕಳೆಯಬೇಕು..

ಅವಳತ್ತಾಗ ಕಣ್ಣೀರೊರೆಸಬೇಕು.. ನಕ್ಕಾಗ ಅವಳ ಖುಷಿಯ ಕ್ಷಣವನ್ನ ನೆನಪಿನ ಗ್ಯಾಲರಿಗೆ ಸೇರಿಸಬೇಕು.. ಅವಳನ್ನ ಮುದ್ದು ಮಾಡಬೇಕು.. ಅವಳಿಗೆ ಅಸಹಜವೆನಿಸುವಂತೆ ನಡೆದುಕೊಳ್ಳಬಾರದು.., ಅವಳಿಗೆ ಒಂದು ನಡವಳಿಕೆ ಇಷ್ಟವಾಗ್ತಿಲ್ಲವೆಂದರೆ ,,, ಅದನ್ನ ಬದಲಾಯಿಸಿಕೊಳ್ಳಲು ಪ್ರಯತ್ನ….

ಅವಳ ಕೈ ಹಿಡಿದು ನಡೆಸುವುದು… ಆಗಾಗ ಸ್ವಲ್ಪ ರೇಗಿಸುತ್ತಾ ಚೇಷ್ಟೆ ಮಾಡುವುದು… ಅವಳ ಹಣೆಗೆ ಮುತ್ತಿಟ್ಟರೆ ಅದು ಅವಳಿಗೆ ಇಡೀ ಜೀವನವೇ ಸಿಕ್ಕಷ್ಟು ಖುಷಿ… ಅಪ್ಪನಂತೆ ಒಂದು ಹುಡುಗಿಗೆ ಅವಳ ಹುಡುಗ ಅನ್ನಿಸಬೇಕು…  ಆ ರೀತಿ ಅವನು ಅವಳೊಂದಿಗಿರಬೇಕು…

Saakshatv Author special , marjala manthana

ಅವಳ ಪಾತ್ರವೇನು..?? 

ಒರಟು ಮನಸ್ಸು ಅವನದ್ದಾದ್ರೂ ,,, ಅವನ ಒಳಮನಸ್ಸು  ಬಹಳ ಮೃದು ಎನ್ನುವುದನ್ನ ಅರಿತು ಅವನನ್ನ ತಾಯಯಿಯಂತೆ  ಸಲಹಿ ಅವನ ಕಾಳಜಿ ಮಾಡುವುದು… ಅವನ ಮಡಿಲಲ್ಲಿ ಮಲಗಿಸಿ ಅವನ ತಲೆ ಕೂದಲು ಸವರುತ್ತಾ ,,, ಅವನ ಬಳಿ ಪ್ರೀತಿಯಿಂದ ಮಾತನಾಡುತ್ತಾ ಅವನ ತೊಂದರೆಗಳನ್ನ ಅರಿತುಕೊಳ್ಳುವುದು.. ಅವನನ್ನ ಅರ್ಥ ಮಾಡಿಕೊಳ್ಳುವುದು.. ಅವನ ಪ್ರೀತಿ , ತೊಂದರೆಗಳನ್ನ ಎಲ್ಲರಿಗಿಂತ ಮುಂಚೆಯೇ ಅರ್ಥ ಮಾಡಿಕೊಳ್ಳುವುದು..
ಇಡೀ ಪ್ರಪಂಚವೇ ಅವನನ್ನ ವಿರೋಧಿಸಿದ್ರೂ ಅವನನ್ನ ಎಲ್ಲರಿಗಿಂತ ಹೆಚ್ಚು ನಂಬುವುದು.. ಅವನ ಒರಟು ಹೃದಯವನ್ನೂ ತನ್ನ ಮೃದುತ್ವದಿಂದ ಹದಗೊಳಿಸುವುದು..
ಅವನ ಪ್ರೀತಿಯ ಬೆಲೆ ಕೊಡುವುದು , ಅವನ ಭಾವನೆಗಳಿಗೆ ಸ್ಪಂದಿಸುವುದು.. ಅವನಿಗೆ ತಾಯಿ ಪ್ರೀತಿ ಕೊಟ್ಟು , ಅವನಿಗೆ ಅಗತ್ಯವಿದ್ದಾಗ ಕರುಣಾಮಯಿಯಾಗುವುದು… ಅವನ್ನೆಷ್ಟೇ ಕಠೋರವಿರಲಿ , ಅವನ ಕೈಬಿಡುವ ಮುನ್ನ ಬದಲಾಯಿಸುವ ಪ್ರಯತ್ನ ಮಾಡುವುದು… ಅವನ ಕಾಳಜಿ ಅರ್ಥ ಮಾಡಿಕೊಂಡು ,,, ಅವನ ಎಲ್ಲರಿಗಿಂತ ಹೆಚ್ಚಾಗಿ ಹುಚ್ಚರಂತೆ ಪ್ರೀತಿ ಮಾಡುವುದು…
ಸಮಯ ಬಂದರೆ ತನ್ನ ಪ್ರೀತಿಗಾಗಿ ಎಲ್ಲರನ್ನೂ ಎದುರುಹಾಕಿಕೊಂಡು ಅವನ ಪ್ರೀತಿಗೆ ಬೆಲೆ ಕೊಟ್ಟು ಅವನಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಅವಳು ನಿಭಾಯಿಸಬೇಕಾದ ಪ್ರಮುಖ ಪಾತ್ರ…

Tags: experiencesmarjala manthanaSaakshatv Author special
ShareTweetSendShare
Join us on:

Related Posts

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

by Shwetha
June 10, 2026
0

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಕರ್ನಾಟಕ ರಾಜಕಾರಣದಲ್ಲಿ ಭಾರಿ ವಾಕ್ಸಮರ ಏರ್ಪಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ...

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

by Shwetha
June 10, 2026
0

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಖ್ಯ ಸಲಹೆಗಾರರಾಗಿ ರಾಜಕೀಯ ತಂತ್ರಗಾರ ಸುನೀಲ್ ಕನುಗೋಳು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

by Shwetha
June 10, 2026
0

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಬಯೋಮೆಟ್ರಿಕ್ ಪರಿಶೀಲನೆ...

ಎಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿ; ಯತ್ನಾಳ್ ಆಗ್ರಹ

ಎಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿ; ಯತ್ನಾಳ್ ಆಗ್ರಹ

by Shwetha
June 10, 2026
0

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ದೊರಕದಿರುವ ವಿಚಾರಕ್ಕೆ ಶಾಸಕ ಬಸನಗೌಡ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಯತ್ನಾಳ್, ದೇವೇಗೌಡರಿಗೆ ರಾಜ್ಯಸಭಾ...

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

by Shwetha
June 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗಿನಿಂದಲೇ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಹಾಗೂ ಆಡಳಿತ ವೈಖರಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಚಿವ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram