L R Shivaramegowda | ನಾನು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತೇನೆ
ಮಂಡ್ಯ : ನನ್ನ ಎಂಪಿ ಮಾಡಿದ್ದು, ಪಕ್ಷದಿಂದ ಉಚ್ಛಾಟನೆ ಮಾಡಿರೋದು ಜೆಡಿಎಸ್. ನನಗೆ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ದೊಡ್ಡದು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟಪಡಿಸಿದ್ದಾರೆ.
2023 ರ ಗೆಲುವಿಗಾಗಿ ಎಲ್.ಆರ್.ಶಿವರಾಮೇಗೌಡ ಅವರು ಸಂಕಲ್ಪ ಯಾತ್ರೆ ಆರಂಭಿಸಿದ್ದಾರೆ. ನಾಗಮಂಗಲದ ಹಳ್ಳಿಹಳ್ಳಿಗಳಲ್ಲೂ ಸಂಕಲ್ಪ ಯಾತ್ರೆ ನಡೆಯುತ್ತಿದೆ.

ಜೆಡಿಎಸ್ ನಿಂದ ಉಚ್ಛಾಟನೆ ಹಿನ್ನಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ರೆಡಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ, ನಾನು ಪ್ರತ್ಯಕ್ಷವಾಗಿ ನಿಲ್ಲಬೇಕು ಅನ್ನೋದು ಜನರ ಅಭಿಪ್ರಾಯ. ನಾನು ಗೆಲ್ತೀನಿ, ನಾನು ಗೆದ್ದಮೇಲೆ ಇಬ್ಬರು ಸೋಲ್ತಾರೆ.
ಆದ್ದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತೇನೆ. ನಾನು ನಾಗಮಂಗಲ ತಾಲೂಕಿನ ಭ್ರಷ್ಟಚಾರ ತೊಡೆದು ಹಾಕ್ತೀನಿ.
ಡಿಸಿ ಕಚೇರಿ, ತಾಲೂಕು ಕಚೇರಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುತ್ತೇನೆ ಎಂದು ಹೇಳಿದರು.








