ಭಾರತದ ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ…
ಭಾರತದ ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ನ್ನ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು (ಆಗಸ್ಟ್ 18) ಮುಂಬೈನಲ್ಲಿ ಅನಾವರಣಗೊಳಿಸಿದರು. ಇಂದು ಮುಂಬೈನಲ್ಲಿ ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನ್ನು ಪ್ರಾರಂಭಿಸಲು ನನಗೆ ಅಪಾರ ಸಂತೋಷವಾಗಿದೆ ಎಂದು ಗಡ್ಕರಿ ಟ್ವೀಟರ್ ನಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
ಈ ವಿಶಿಷ್ಟವಾದ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಎಸಿ ಬಸ್ ನ್ನ ಸ್ವಿಚ್ ಮೊಬಿಲಿಟಿ ಲಿಮಿಟೆಡ್ (‘ಸ್ವಿಚ್’) ತಯಾರಿಸಿದೆ. ಸ್ವಿಚ್ ಇಐವಿ 22 ಭಾರತದ ಮೊದಲ ಡಬಲ್ ಡೆಕ್ಕರ್ ಬಸ್. ಇದನ್ನ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ. ಸ್ವಿಚ್ ಮೊಬಿಲಿಟಿ, ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆ.
ಇದು ಮೊದಲ ಸೆಮಿಲೋ ಪ್ಲೋರ್ ಹವಾನಿಯಂತ್ರಿತ ಎಲೆಕ್ಟ್ರಿಕ್ ಡಬಲ್-ಡೆಕ್ಕರ್ ಬಸ್ ಆಗಿದ್ದು, ಡಬಲ್-ಡೆಕ್ಕರ್ AC ಬಸ್ ಪ್ರಪಂಚದಲ್ಲೇ ವಿಶಾಲವಾದ ಬಾಗಿಲು ಮತ್ತು ಹಿಂಭಾಗದ ಮೆಟ್ಟಿಲನ್ನ ಹೊಂದಿದೆ. ನವೀನ ಸ್ಟೈಲಿಂಗ್ ಮತ್ತು ಆಕರ್ಷಕವಾದ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸವನ್ನ ಸಹ ಹೊಂದಿದೆ.