Bigboss kannada: ರಾಕಿ ಫ್ರೆಂಡ್ ಅಷ್ಟೆ, ಇನ್ನೂ 7 ವರ್ಷ ಮದುವೆ ಆಗಲ್ಲ – ಸೋನು ಗೌಡ
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ದೊಡ್ಮನೆಯ ಹೈಲೈಟ್ ಆಗಿದ್ದಾರೆ.
ಬಿಗ್ ಬಾಸ್ ಇದೀಗ 2 ನೇ ವಾರಕ್ಕೆ ಕಾಲಿಟ್ಟಿದ್ದು, ಮನೆ ವಾತಾವರಣ ಮತ್ತಷ್ಟು ಬದಲಾಗಿದೆ. ಸೋಷಿಯಲ್ ಮೀಡಿಯಾ ಸ್ಟಾರ್ , ಟ್ರೋಲಿಗರ ಫೇವರೇಟ್ ಆಗಿರುವ ಸೋನು ಗೌಡ ಬಾರಿ ಬಿಗ್ ಬಾಸ್ ಮನೆಯ ಹೈಲೇಟ್ ಆಗಿದ್ದಾರೆ.. ಎಲ್ಲರ ಕಣ್ಗಳೂ ಅವರ ಮೇಲೆಯೇ ನೆಟ್ಟಿದೆ.. ಅಲ್ಲದೇ ಸೋನು ಗೌಡ ಸಹ ಹೇಗಾದ್ರೂ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..
ಇದೀಗ ತಾನು 7 ವರ್ಷಗಳ ಕಾಲ ಮದುವೆಯಾಗಲ್ಲ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.. ಹೌದು, ರಾಕಿ ಮೇಲಿನ ಅವರ ಫೀಲಿಂಗ್ ಗಾಸಿಪ್ ಬೆನ್ನಲ್ಲೇ ರಾಕೇಶ್ ಮೇಲೆ ಪ್ರೀತಿ ಇದೆಯಾ ಎಂದು ಸ್ಫೂರ್ತಿ ನೇರವಾಗಿ ಸೋನುಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋನು ನೇರವಾಗಿ ಉತ್ತರಿಸಿದ್ದು, ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್ ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ 7 ವರ್ಷ ಮದುವೆಯಾಗಲ್ಲ ನಾನು. ನಾನು ಸಿನಿಮಾರಂಗದಲ್ಲಿ ಬೆಳೆಯಬೇಕು ಎಂದು ಹೇಳಿಕೊಂಡಿದ್ದಾರೆ.








