Sana Marine: ಮಧ್ಯದ ನಶೆಯಲ್ಲಿ ಡ್ಯಾನ್ಸ್ ಮಾಡಿದ ಫಿನ್ ಲ್ಯಾಂಡ್ ಪ್ರಧಾನಿ – ವಿಡಿಯೋ ವೈರಲ್
ಫಿನ್‌ಲ್ಯಾಂಡ್‌ನ ಪ್ರಧಾನಿ ಸನಾ ಮರೀನ್ ಅವರು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಮಧ್ಯಪಾನ ಮಾಡಿ ಕುಣಿದಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಪ್ರಧಾನಿ ಸನ್ನಾ ಮರಿನ್ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಪರೀಕ್ಷೆಗೆ ಒಳಪಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಪಾರ್ಟಿಯಲ್ಲಿ ಮಧ್ಯಪಾನ ಮಾತ್ರ ಮಾಡಿದ್ದಾಗಿ ಮರೀನ್ ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಪರೀಕ್ಷೆಗೆ ಸಿದ್ಧ
ಡ್ರಗ್ಸ್ ಸೇವನೆ ಕೇವಲ ವದಂತಿಯಷ್ಟೆ ಎಂದು ಸನಾ ಮರೀನ್ ಹೇಳಿದ್ದಾರೆ. ಡ್ರಗ್ಸ್ ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ತಿಳಿಸಿದ್ದಾರೆ. “ ನಾನು ಸ್ನೇಹಿತರೊಂದಿಗೆ ಕೂಡಿ ಪಾರ್ಟಿ ಮಾಡಿದೆವು ನಾನೂ ಕೂಡ ಹಾಡಿದೆ ಮತ್ತು ಡ್ಯಾನ್ಸ್ ಮಾಡಿದೆ. ನಾನು ಯಾವತ್ತು ಡ್ರಗ್ಸ್ ತೆಗದುಕೊಂಡಿಲ್ಲ. ಮುಚ್ಚಿಟ್ಟುಕೊಳ್ಳುವುದು ಏನೂ ಇಲ್ಲ. ಇದು ಖಾಸಗಿ ವೀಡಿಯೋ. ಇದನ್ನ ಈ ರೀತಿ ಸಾರ್ವಜನಿಕಗೊಳಿಸಬಾರದಿತ್ತು ಎಂದಿದ್ದಾರೆ ಫಿನ್ ಲ್ಯಾಂಡ್ ಪ್ರಧಾನಿ..
Finland’s Prime Minister @MarinSanna is in the headlines after a video of her partying was leaked today.
She has previously been criticized for attending too many music festivals & spending too much on partying instead of ruling.
The critics say it’s not fitting for a PM. pic.twitter.com/FbOhdTeEGw
— Visegrád 24 (@visegrad24) August 17, 2022
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಜನತೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಸಾಮಾನ್ಯ ಎಂದು ಕರೆದರೆ ಮತ್ತೆ ಕೆಲವರು ಸನಾ ಮರೀನ್ ಫಿನ್‌ಲ್ಯಾಂಡ್‌ನ ಪ್ರಧಾನಿಯಾಗಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.
ಫಿನ್ ಲ್ಯಾಂಡ್ ಪ್ರಧಾನಿ ಸನಾ ಮರೀನ್ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. 2021 ರಲ್ಲಿ ಕರೋನಾ ಅವಧಿಯಲ್ಲಿ ಅವರು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರ ಫೋಟೋವೊಂದು ವೈರಲ್ ಆಗಿದ್ದು, ಅದಕ್ಕಾಗಿ ಅವರು ಕ್ಷಮೆ ಕೇಳಬೇಕಾಯಿತು.
Finland PM Sana Marine Was Seen Dancing While Drinking Alcohol; Opposition Accused Of Taking Drugs








