Sting Operation: ಪಶ್ಚಿಮ ಬಂಗಾಳದ ಸಚಿವರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ..
ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರನ್ನ ಹಗರಣಗಳಲ್ಲಿ ಸಿಲುಕಿಸಲು ಬಿಜೆಪಿ ಬಲೆ ಬೀಸಿದ್ದು ಎಲ್ಲಾ ಸಚಿವರೂ ಎಚ್ಚರದಿಂದಿರಬೇಕು ಎಂದು ಎಂದಿದ್ದಾರೆ. ಹಗರಣಗಳಲ್ಲಿ ಸಿಲುಕಿಸಲು ಸ್ಟಿಂಗ್ ಆಪರೇಷನ್ ಅಥವಾ ಕುಟುಕು ಕಾರ್ಯಾಚರಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಮತಾ ಎಚ್ಚರಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕುಟುಕು ಕಾರ್ಯಾಚರಣೆಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರು ಅದನ್ನ ಹಿಡಿದು ಪ್ರಕರಣಗಳಲ್ಲಿ ಸಿಲುಕಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಶ್ವೇತಪತ್ರಗಳಿಗೆ ಸಹಿ ಹಾಕದಂತೆ ಕೇಳಿಕೊಂಡಿದ್ದಾರೆ.
ಎಲ್ಲಾ ಸಚಿವರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು. ಐಟಿ ರಿಟರ್ನ್ಸ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ತಲುಪಿದ ನಂತರ ರಸೀದಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಚಿವರ ಕಾರ್ಯವೈಖರಿಯನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ.
ಸಚಿವರು ಕಡತವನ್ನ ಕೂಲಂಕುಷವಾಗಿ ಓದದೆ ಸಹಿ ಮಾಡದಂತೆ ಕೇಳಿಕೊಂಡಿದ್ದಾರೆ. ಶ್ವೇತಪತ್ರಗಳ ಮೇಲೆ ಸಹಿ ಮಾಡಬೇಡಿ. ಸಹಿಯ ಮೇಲೆ ಮತ್ತು ಕೆಳಗೆ ಯಾವುದೇ ಸ್ಥಳವಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಿಳಿಸಿದ್ದಾರೆ. ಜಾಗವಿದ್ದರೆ ಏನಾದರೂ ಬರೆಯುವ ಅವಕಾಶದ ಸಾದ್ಯತೆ ಇದೆ.








