ಫಸ್ಟ್ ಹ್ಯಾಂಡ್
ಇನ್ನೊಬ್ರು ಬಳಸಿದ ಬಟ್ಟೆ ಇಷ್ಟ ಆಗಲ್ಲ, ಈ ಮನುಷ್ಯರಿಗೆ ,
ಸೆಕೆಂಡ್ ಹ್ಯಾಂಡ್ ವಸ್ತುಗಳು ಇಷ್ಟ ಆಗಲ್ಲ, ಎಲ್ಲದ್ರಲ್ಲೂ ಹೊಸದೇ ಬೇಕು ಇವರಿಗೆ,
ಎಲ್ಲದ್ರಲ್ಲು ಫಸ್ಟ್ ಆಗಿರಬೇಕು ಅನ್ನೋ ಇದೇ ಮನುಷ್ಯರೇ ಇನ್ನೊಬ್ರ ಖುರ್ಚಿಗಾಗಿ , ಅವರ ಪಟ್ಟಕ್ಕಾಗಿ , ಆಸೆ ಪಡ್ತಾರೆ , ಕಸಿಯೋಕೆ ಕಸರತ್ತು ಮಾಡ್ತರಲ್ಲ, ಆಗ ಯಾಕೆ ಸೆಕೆಂಡ್ ಹ್ಯಾಂಡ್ ಅನ್ಸಲ್ಲ ಅಂತಿನಿ ನಮ್ಮ ಮನುಷ್ಯರಿಗೆ..!
– ನಿಹಾರಿಕಾ ರಾವ್ –
@@@@@@@@@@@@@@@@@@@@@@
ಜೊತೆಗಿರುವವರೆಲ್ಲರೂ ಹಿತೈಶಿಗಳೇ ಅಲ್ಲ…
ಬೆನ್ನ ಹಿಂದೆ ಇರೋರೆಲ್ಲರೂ ಚೂರಿ ಹಾಕೋರೆ ಅಲ್ಲ…
ಮನಸ್ಸಿಗೆ ಹಿಡಿಸಿದವರೆಲ್ಲರೂ ನಿನ್ನ ಆಪ್ತರೇ ಇರಲ್ಲ…
ಹಿಡಿಸದೇ ಇರುವವರೆಲ್ಲರೂ ನಿನ್ನ ಶತ್ರುಗಳೇ ಅಗಿರಲ್ಲ…
ಕಣ್ಣ ಮುಂದೆ ಕಾಣಿಸುವುದೆಲ್ಲವೂ ನಿಜವೇ ಆಗಿರಲ್ಲ…
ಕಣ್ಣಿಗೆ ಕಾಣಿಸದೇ ಇರುವುದು ನಿನ್ನ ಭ್ರಮೆಯೇ ಆಗಿರಲ್ಲ…
ನಿನ್ನ ಜೊತೆ ಖುಷಿಯಾಗಿರೋರು ನಿನ್ನ ನೋಡಿ ಹೊಟ್ಟೆ ಕಿಚ್ಚು ಪಡಲ್ಲ ಅಂತಲ್ಲ..
ನಿನ್ನ ಮುಂದೆ ನೇರವಾಗಿ ಮಾತನಾಡಿ ನಿನ್ನ ಬೈದವರು ನಿನ್ನ ಒಳಿತಿನ ಬಗ್ಗೆ ಯೋಚಿಸುವುದಿಲ್ಲ ಅಂತವೂ ಅಲ್ಲ
ಎಲ್ಲವನ್ನೂ ಸರಿಯಾಗಿ ಗ್ರಹಿಸಿ , ಅರ್ಥ ಮಾಡಿಕೊಂಡು , ಹೊಂದಿಕೊಳ್ಳುವ , ಗುಣ , ತಾಳ್ಮೆ, ಚಾತುರ್ಯತೆ , ಮನಸ್ಥಿತಿ , ಎಲ್ರಲ್ಲೂ ಇರಲ್ಲ….
– ನಿಹಾರಿಕಾ ರಾವ್ –