ಪುರುಷರಿಗೆ ಕಣ್ಣೀರು ಬರುವುದಿಲ್ಲ ಅಂತ ಅಲ್ಲ…
ಪುರುಷ ಅನ್ನೋ ಹೆಸರಿನ ಹಿಂದೆ ಕಣ್ಣೀರು ಅಡಗಿಸಿಟ್ಟುಕೊಂಡಿರುತ್ತಾರೆ..
ಮಹಿಳೆಯರು ಅಂದಾಕ್ಷಣ ಬಡಬಡ ಮಾತನಾಡುವ ಮಾತಿನ ಮಲ್ಲಿಯರು ಅಷ್ಟೇ ಅಲ್ಲ… ಯಾರ ಬಳಿಯೂ ಹೇಳಲಾರದೇ ತನ್ನೆದೆಯೊಳಗೆ ಸಾವಿರ ವಿಚಾರಗಳನ್ನ ಅಡಗಿಸಿಟ್ಟುಕೊಂಡಿರುತ್ತಾರೆ.
ಮಹಿಳೆಯರು ಅಂದಾಕ್ಷಣ ಅಬಲೆಯರು ಬರೀ ಕಣ್ಣೀರುಡುತ್ತಾರೆ ಅಂದುಕೊಳ್ಳುತ್ತಾರೆ ಕೆಲವರು.. ಅವರಿಗೆ ಗೊತ್ತಿಲ್ಲ, ಮಹಿಳೆ ಒಮ್ಮೆ ಹೃದಯ ಕಲ್ಲು ಮಾಡಿಕೊಂಡ್ರೆ ಅದೆಷ್ಟು ಅಪಾಯಕಾರಿಯಾಗಿರುತ್ತೆ.. ಎಷ್ಟು ಜನರ ಕಣ್ಣಲ್ಲಿ ನೀರು ತರಿಸ್ತಾರೆ ಅಂತ…
ಪುರುಷರು ಗಡುಸು ತುಂಬಾ ಯಾವುದೇ ನೋವು ಸಂಕಟ ಆಗುವುದಿಲ್ಲ ಎಂದುಕೊಳ್ತಾರೆ.. ಅವರು ಮನಸ್ಸಿನ ಸಂಕಟವನ್ನ ತನ್ನ ಪ್ರೀತಿ ಪಾತ್ರರನ್ನ ನೋಡಿ ನಿವಾರಿಸಿಕೊಳ್ತಾರೆ.. ಮನೆ ಮಂದಿಯ ಖುಷಿ ನೋಡಿ , ತಂದೆ ತನ್ನ ಮಕ್ಕಳಿಗೆ ಚಾಕಲೇಟ್ ನೋಡಿ , ಬೆಳಿಗ್ಗಿನಿಂದ ತಾನು ದುಡಿದ ಶ್ರಮ , ಬೆವರು ಸುರಿಸಿ ಪಟ್ಟ ಕಷ್ಟ ಮರೆಯುತ್ತಾರೆ…
ಮಹಿಯರಂತೆ ಪುರುಷರೂ ದೌರ್ಜನ್ಯಕ್ಕೆ ಒಳಗಾಗುತ್ತಾರೆ.. ಆದ್ರೆ ಕೆಲವೊಮ್ಮೆ ಸಂದರ್ಭ , ಪ್ರತಿಷ್ಟೆ , ಮರ್ಯಾದೆ , ಅನಿವಾರ್ಯತೆ ಇಂದ ಕೆಲವರು ಅನ್ಯಾಯಕ್ಕೆ ಒಳಗಾದ್ರೂ , ದೌರ್ಜನ್ಯಕ್ಕೆ ಒಳಗಾದ್ರೂ ಹೇಳದೇ ಸಂಕಟ ಪಡುವುದಿದೆ..
@@@@@@@@
ನಾನು ಮಹಿಳೆಯಾಗಿ , ಪತ್ರಕರ್ತೆಯಾಗಿ ಜೀವನದಲ್ಲಿ ನಾನು ನಿತ್ಯ ನೋಡುವ ಘಟನೆಗಳು , ಮಾಡುವ ಸುದ್ದಿಗಳು , ಪ್ರಾಕ್ಟಿಕಲ್ ಆಗಿ ನಾನು ನೋಡಿದ ಸಮಾಜದ ಬಗ್ಗೆ ನನ್ನ ದೃಷ್ಟಿಕೋನದಲ್ಲಿ ಬರೆದಿದ್ದೇನೆ.. ತಪ್ಪೋ ಸರಿಯೋ ಗೊತ್ತಿಲ್ಲ.. ತಪ್ಪಿದ್ರೆ ದಯಮಾಡಿ ಕ್ಷಮಿಸಿ , ಸರಿ ಅನ್ನಿಸಿದ್ರೆ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಷ್ಟೇ…
– ನಿಹಾರಿಕಾ ರಾವ್ –








