T20 WC 2022 : ಬಾಂಗ್ಲಾ ತಂಡಕ್ಕೆ ಕೋಚ್ ಆದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್
ಏಷ್ಯಾಕಪ್ 2022, ಟಿ 20 ವಿಶ್ವಕಪ್ 2022 ಟೂರ್ನಿಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೆಗಾ ಟೂರ್ನಿಗಳಿಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಶ್ರೀಧರನ್ ಶ್ರೀರಾಮ್ ಅವರನ್ನು ಕೋಚ್ ಆಗಿ ನೇಮಕ ಮಾಡಿದೆ.
ಈ ವಿಷಯವನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಡೈರೆಕ್ಟರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾಕಪ್ ನಲ್ಲಿ ನಾವು ಹೊಸ ಉತ್ಸಾಹದೊಂದಿಗೆ ಮುನ್ನುಗ್ಗಲು ಬಯಸಿದ್ದೇವೆ. ನಮ್ಮ ಪ್ರಧಾನ ಗುರಿ ಟಿ 20 ವಿಶ್ವಕಪ್.
ಆ ಸಂದರ್ಭದಲ್ಲಿ ಈ ಬದಲಾವಣೆ ನಡೆದಿದ್ದರೇ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಡಿಕೊಳ್ಳುವುದು ಕಷ್ಟವಾಗುತ್ತಿತ್ತು.

ಆಗಾಗಿ ಈಗಲೇ ಬದಲಾವಣೆ ಮಾಡಲಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಡೈರೆಕ್ಟರ್ ತಿಳಿಸಿದ್ದಾರೆ.
ಇನ್ನು ಶ್ರೀರಾಮ್ ಅವರನ್ನು ಸೀಮಿತ ಓವರ್ ಗಳ ಕೋಚ್ ಮಾಡಿರುವುದರಿಂದ ಪ್ರಸ್ತುತ ಬಾಂಗ್ಲಾ ಕೋಚ್ ಆಗಿರುವ ರಸೆಲ್ ಡೋಮಿಂಗೋ ಬಾಂಗ್ಲಾದೇಶದ ಟೆಸ್ಟ್ ತಂಡಕ್ಕೆ ಕೋಚ್ ಆಗಲಿದ್ದಾರೆ.
ಇನ್ನು ಚೆನ್ನೈ ಮೂಲದ ಶ್ರೀಧರನ್ ಶ್ರೀರಾಮ್ 2000 – 2004ರ ಅವಧಿಯಲ್ಲಿ ಟೀಂ ಇಂಡಿಯಾ ಪರ ಎಂಟು ಏಕದಿನ ಪಂದ್ಯಗಳನ್ನಾಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿದ್ದ ಶ್ರೀಧರನ್, ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಕೋಚಿಂಗ್ ಸ್ಟಾಫ್ ನಲ್ಲಿದ್ದಾರೆ.








