ನಿಜ ಬಣ್ಣ
ನಿಜವಾಗಲೂ ನಿಮ್ಮ ಮುಂದಿರುವವರು ಎಂಥವರು ಅಂತ ಗೊತ್ತಾಗಬೇಕಂದ್ರೆ ಅವರ ಜೊತೆಗೆ ನೀವು ಚನ್ನಾಗಿರೋದನ್ನ ನಿಲ್ಲಿಸಿ ಸಾಕು, ಅವರಿಗೆ ಸಹಾಯ ಮಾಡುವುದು , ಅವರ ಮಾತು ಕೇಳುವುದನ್ನ ಬಿಟ್ಟು ನೋಡಿ ಸಾಕು…
ಬರೆದಿಟ್ಕೊಳ್ಳಿ ಅದೇ ಕ್ಷಣದಿಂದ ಅವರ ನಿಜವಾದ ಬಣ್ಣ ಬಯಲಾಗಲಿಲ್ಲ ಅಂದ್ರೆ ಕೇಳಿ.. ಯಾಕಂದ್ರೆ ಎಲ್ಲಿವರೆಗೂ ನೀವು ಅವರಿಗೆ ಒಳ್ಳೆಯವರಾಗಿ, ಅವರಂದ ಹಾಗೆಲ್ಲ ಅನ್ನಿಸಿಕೊಂಡು , ಅವರಿಗೆ ಬೇಕಾಗಿರೋದನ್ನ ಮಾಡುತ್ತಾ , ಅವರ ಪರವಾಗಿರುತ್ತೀರೋ , ಅಲ್ಲಿವರೆಗಷ್ಟೇ ಅವರ ಒಳ್ಳೆತನದ ಮುಸುಕು ಇರುತ್ತೆ.. ಅದೇ ನಿಮ್ಮಿಂದ ಏನೂ ಪ್ರಯೋಜನ ಇಲ್ಲ ಇನ್ಮುಂದೆ ಅಂತ ಗೊತ್ತಾದ್ರೆ , ಅದೇ ಒಳ್ಳೆತನದ ಮುಖವಾಡ ಕಳಚಿ ತಿಪ್ಪೆಗೆಸೆದು ನಿಮ್ಮನ್ನ ಕಾಲಿನ ಕಸಕ್ಕಿಂತ ಕಡೆಯಾಗಿ ಕಾಣುತ್ತಾರೆ..
ನಯವಾಗಿ ವಂಚಿಸೋ ನಯವಂಚಕರ ನಡುವೆ , ಬಾಯಿಗೆ ಬಂದ ಹಾಗೆ ಬೈದು ನಿಮ್ಮ ಜೊತೆಗೆ ಸದಾ ಒಂದೇ ರೀತಿ ಕಟ್ಟು ನಿಟ್ಟಾಗಿ ನಡೆದುಕೊಳ್ಳುವರು ನಿಜವಾಗಲೂ ನಿಮ್ಮ ಹಿತೈಶಿಗಳು.. ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಗುಣ ಅವರಿಗೆ ಇರುವುದಿಲ್ಲ…
@@@@@@@@@@@@@@@@@@@@@@@@@@@@@@@@
ರೀಲ್ ಮತ್ತು ರಿಯಲ್
ರಿಯಲ್ ಜೀವನದಲ್ಲಿ ಸಿಗದೇ ಇದ್ದದ್ದು ,, ಆಗದೇ ಇದ್ಧದ್ದು , ಆಗಬೇಕಿತ್ತು , ಸಿಗಬೇಕಿತ್ತು ಅಂದುಕೊಂಡಿದ್ದೇ ಕಲ್ಪನೆಗಳ ಮೂಲಕ , ಬರವಣಿಗೆಯ ರೂಪಕ್ಕೆ ಬರುವುದು. ಕಥೆಗಳಾಗುವುದು..
ರೀಲ್ ಹಾಗೂ ರಿಯಲ್ ಗೂ ಅಜಗಜಾಂತರ ವ್ಯತ್ಯಾಸವಿದೆ..
ರೀಲ್ ನಲ್ಲಿ ನಡೆಯುವ 90% ರಷ್ಟು ಸತ್ಯ ರಿಯಲ್ ನಲ್ಲಿ ಇರೋದಿಲ್ಲ,,, ಅದನ್ನ ಒಪ್ಪಲೇಬೇಕು…
ರೀಲ್ ನಲ್ಲಿ 99% ಹ್ಯಾಪಿ ಎಂಡಿಂಗ್ಸ್ ಇದೆ..ರಿಯಲ್ ನಲ್ಲಿ ಅದರ 10 % ರಷ್ಟು ಕೂಡ ಹ್ಯಾಪಿ ಎಂಡಿಂಗ್ಸ್ ಇರಲ್ಲ,,
ಏನೂ ಸಿಕ್ಕಿಲ್ಲವೋ ಅದು ಸಿಕ್ಕಿದ್ರೆ ಚನಾಗಿರುತ್ತಿತ್ತು ಅನ್ನುವ ಕಲ್ಪನೆಗಳು ಕಥೆಯಾಗಿ ಬರೆದಾಗೆಷ್ಟು ಚೆಂದ ಇರುತ್ತದಷ್ಟೇ … ವಾಸ್ತವದಲ್ಲಿ ಅಸಲಿಯತ್ತು ಕಠೋರವಾಗಿರುತ್ತದೆ…
ಅಸಲಿಗೆ ನಮಗೇನು ಸಿಗುವುದಿಲ್ಲವೋ ,, ಅವುಗಳನ್ನ ಕಲ್ಪನೆಯಲ್ಲಿ ಕಂಡುಕೊಂಡು ಭಾವನೆಗಳನ್ನ ಸೇರಿಸಿ ಬರವಣಿಗೆ ರೂಪಕ್ಕೆ ತರುತ್ತೇವೆ….








