Jothe Jotheyali serial : ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಿದ್ರಾ ಅನಿರುದ್ಧ..
ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಟಿಸಿ ಖ್ಯಾತಿ ಗಳಿಸಿ ನಂತರ ಸಿನಿಮಾರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಅನಿರುದ್ಧ ಅವರು ಮತ್ತೆ ಬಣ್ಣದ ಜಗತ್ತಿಗೆ ಕಮ್ ಬ್ಯಾಕ್ ಮಾಡಿದ್ದು ಮಾತ್ರ ಕಿರುತೆರೆಯ’ ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ.. ಈ ಧಾರಾವಾಹಿ ಅಷ್ಟೇ ಬೇಗ ಜನರ ಫೇವರೇಟ್ ಆಯ್ತು.. ಆರ್ಯವರ್ಧನ್ ಆಗಿಯೇ ಅನಿರುದ್ಧ ಫೇಮ್ ಗಳಿಸಿದರೂ ಸಹ.. ಸಿನಿಮಾಗಳಿಗಿಂತ ಧಾರವಾಹಿ ಮೂಲಕವೇ ಆರ್ಯವರ್ಧನ್ ಫೇಮಸ್ ಆದರು.. ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ರು..
ಆದ್ರೀಗ ಅನಿರುದ್ಧ ಅವರು ಧಾರವಾಹಿಯಿಂದ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ.. ಹೌದು…! ಅನಿರುದ್ಧ ಅವರು ಧಾರಾವಾಹಿಯಿಂದ ಹೊರ ನಡೆದ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಧಾರಾವಾಹಿಯಿಂದ ಅನಿರುದ್ಧ ಅವರೇ ಹೊರ ನಡೆದಿದ್ದಾರೆ ಎಂದು ಒಂದು ಕಡೆ ಸುದ್ದಿ ಆಗುತ್ತಿದ್ದರೆ, ಧಾರಾವಾಹಿ ತಂಡವೇ ಅವರನ್ನು ಹೊರ ಕಳುಹಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ ಸರಿಯಾಗಿ ಯಾವುದೇ ಸ್ಪಷ್ಟತೆಯಿಲ್ಲ..
ಆದ್ರೀಗ ಬಗ್ಗೆ ಅನಿರುದ್ಧ ಮೌನ ಮುರಿದಿದ್ದಾರೆ.. ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ. ವಾಹಿನಿಯಾಗಲಿ ಅಥವಾ ಧಾರಾವಾಹಿ ತಂಡವಾಗಲಿ, ಈ ಕುರಿತು ಮಾತನಾಡಲು ತಮ್ಮನ್ನು ಸಂಪರ್ಕಿಸಿಲ್ಲ , ಈ ಸುದ್ದಿಯ ಕುರಿತಾಗಿ ಮಾತನಾಡಲು ಚಾನೆಲ್ ಗೆ ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.. ಅಲ್ಲದೇ ಒಂದು ವೇಳೆ ಆ ರೀತಿ ನಡೆದರೂ ನಾನು ಪತ್ರಿಕಾಗೋಷ್ಠಿ ಮೂಲಕ ಎಲ್ಲ ವಿಷಯವನ್ನೂ ತಿಳಿಸುವುದಾಗಿ ತಿಳಿಸಿದ್ದಾರೆ..