ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು.. ನೋಡ್ತಾ ನೋಡ್ತಾ 2 ವಾರಗಳು ಮುಗಿದೇ ಹೋಗಿವೆ..
2 ನೇ ಕಂಟೆಸ್ಟೆಂಟ್ ಕೂಡ ಮನೆಯಿಂದ ಹೊರನಡೆದಾಗಿದೆ.. ಆದ್ರೆ ಇದು ಅನಿರೀಕ್ಷಿತ.. ಈ ಬಾರಿ ಯಾರೂ ಎಲಿಮಿನೇಟ್ ಆಗಲಿಲ್ಲ.. ಬದಲಾಗಿ ಅನಿವಾರ್ಯವಾಗಿ ಮನೆಯಿಂದ ಹೊರನಡೆಯಬೇಕಾಯ್ತು..
ಮನೆಯ ಹೈಲೇಟ್ ಆಗಿದ್ದ , ಮನೆಯ ಮೊದಲ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ ಎಲಿಮಿನೇಟ್ ಆಗದೇ ಮನೆಯಿಂದ ನೇರವಾಗಿ ಹೊರ ನಡೆದಿದ್ದಾರೆ.. ಇದಕ್ಕೆ ಕಾರಣ ಅವರ ಕೈಗೆ ಆಗಿದ್ದ ಪೆಟ್ಟು..
ಅನಿರೀಕ್ಷಿತ ಹಾಗೂ ಶಾಕಿಂಗ್ ಎಂಬಂತೆ ಅರ್ಜುನ್ ಹೊರಬಂದಿದ್ದು , ಕೆಲ ಕಂಟೆಸ್ಟೆಂಟ್ ಗಳು ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ..
ಅರ್ಜುನ್ ಎಲ್ಲರ ಜೊತೆಗೆ ಹೊಂದುಕೊಂಡಿದ್ದರು.. ಚನ್ನಾಗಿದ್ದರು.. ಮೊದಲ ಕ್ಯಾಪ್ಟನ್ ಕೂಡ ಇವರೇ ಆಗಿದ್ದರು.. ಆದ್ರೆ ಕ್ಯಾಪ್ಟನ್ ಶಿಪ್ ನಿಂದಲೇ ಅವರು ಹೊರ ನಡೆಯುವಂತಾಯ್ತು ಎನ್ನಬಹುದು..
ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಲ್ಲೇ ಅವರು ದಿನಕಳೆದರು.. ನೋವು ನಿವಾರಣೆ ಆಗದೇ ಇರದ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ.
ಸತತ ಒಂದು ವಾರದಿಂದ ಕೈಗೆ ನೋವು ಮಾಡಿಕೊಂಡೇ ಆಟದಲ್ಲಿ ಭಾಗಿಯಾಗುತ್ತಿದ್ದ ಅರ್ಜುನ್ ಅವರನ್ನು ಎಲಿಮಿನೇಟ್ ಮಾಡಲಾಗಿಲ್ಲ.. ಬದಲಾಗಿ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಕೆಲ ಸ್ಪರ್ಧಿಗಳು ಅತ್ತಿದ್ದೂ ಭಾವತಾತ್ಮಕ ವಾತಾವರಣ ನಿರ್ಮಾಣವಾಗಿತ್ತು..








