Mandya | ಧರ್ಮ ದಂಗಲ್ ನಡುವೆ ಭಾವೈಕ್ಯ ಸಾರುವ ಸುದ್ದಿ
ಮಂಡ್ಯ : ಧರ್ಮ ದಂಗಲ್ ನಡುವೆ ಭಾವೈಕ್ಯ ಸಾರುವ ಸುದ್ದಿವೊಂದು ಇಲ್ಲಿದೆ. ನಿವೃತ್ತ ಶಿಕ್ಷಕರಾಗಿರುವ ಖಲೀಂಉಲ್ಲಾ ಅವರು ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಮಾಡುವುದಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಆ ಮೂಲಕ ನಾಗಮಂಗಲದ ಮಹ್ಮದ್ ಖಲೀಂ ಉಲ್ಲಾ ಇತರರಿಗೆ ಮಾದರಿಯಾಗಿದ್ದಾರೆ.
ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿರುವ ಖಲೀಂ ಉಲ್ಲಾ ಸದ್ಯ ಹಂಪಿ ವಿವಿಯ ಸೆನೆಟ್ ಸದಸ್ಯರಾಗಿದ್ದಾರೆ.
ನಿವೃತ್ತಿ ಬಳಿಕ ಪ್ರಾಚೀನ ದೇವಾಲಯಗಳ ಉಳಿವಿಗೆ ನಿರ್ಧಾರ ಮಾಡಿರುವ ಖಲೀಂಉಲ್ಲಾ, ಈವರೆಗೆ 4 ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದಾರೆ.

ಅಲ್ಲದೆ ಇತಿಹಾಸವಿರುವ, ಪಾಳುಬಿದ್ದ ದೇವಾಲಯಗಳ ಉಳಿವಿಗೆ ಗ್ರಾಮಸ್ಥರನ್ನು ಸಂಘಟಿಸುತ್ತಿದ್ದಾರೆ.
ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಸಂಪರ್ಕಯೊಂದಿ ಟ್ರಸ್ಟ್ ಹಾಗೂ ಸರ್ಕಾರದ ನೆರವು ಪಡೆದು ದೇವಾಲಯ ಜೀರ್ಣೋದ್ಧಾರ ಮಾಡುತ್ತಿದ್ದಾರೆ.
ಅಲ್ಲದೆ ನಾಗಮಂಗಲ ದರ್ಶನ ಎಂಬ ಪುಸ್ತಕ ರಚನೆ ಮಾಡಿದ್ದಾರೆ ಜೊತೆಗೆ ಕಾಲೇಜುಗಳಲ್ಲಿ ಉಪನ್ಯಾಸ ನೀಡಿ ದೇವಾಲಯ ಉಳಿವಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.








