Savarkar photo | ಗಣೇಶೋತ್ಸವಕ್ಕೆ ಸಾವರ್ಕರ್ ಫೋಟೋ ಅಭಿಯಾನಕ್ಕೆ ಚಾಲನೆ
ಬೆಳಗಾವಿ : ಗಣೇಶೋತ್ಸವಕ್ಕೆ ಸಾವರ್ಕರ್ ಬ್ಯಾನರ್, ಫೋಟೋ ನೀಡುವ ಅಭಿಯಾನಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದ್ದಾರೆ.
ಬೆಳಗಾವಿಯ ಕಾಮತ್ ಗಲ್ಲಿಯ ಗಣಪತಿ ಮಂಡಳಿಗೆ ಪ್ರಮೋದ್ ಮುತಾಲಿಕ್ ಅವರು ಸಾವರ್ಕರ್ ಫೋಟೋ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ರಾಜ್ಯದ ಹತ್ತು ಸಾವಿರ ಗಣಪತಿ ಮಹಾಮಂಡಳಿ ಗಳಿಗೆ ಬ್ಯಾನರ್, ಫೋಟೊ ನೀಡುತ್ತೇವೆ.

ಗಣಪತಿ ಪ್ರತಿಷ್ಠಾಪನೆ ಮಾಡುವವರೆಗೂ ಅಭಿಯಾನ ಮಾಡುತ್ತೇವೆ. ಎಲ್ಲ ಸಾರ್ವಜನಿಕ ಗಣಪತಿ ಮಂಟಪದಲ್ಲಿ ಬ್ಯಾನರ್ ಹಾಕುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪ್ರಮೋದ್ ಮುತಾಲಿಕ್, ಮುಸ್ಲಿಮರು ಮತ್ತು ಕಾಂಗ್ರೆಸ್ ನವರು ಸಾವರ್ಕರ್ ಫೋಟೊ ಮುಟ್ಟಿದ್ರೇ ಕೈ ಕಟ್ ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ.








