White Python | ಅಪರೂಪದ ಬಿಳಿ ಹೆಬ್ಬಾವು ಪತ್ತೆ!
ಕುಮಟಾ ಬಳಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ
ಮಿರ್ಜಾನ್ ನ ಮನೆಯೊಂದರ ಬಳಿಕ ಹಾವು ಪತ್ತೆ
ಸುಬ್ರಹ್ಮಣ್ಯ ನಾಯ್ಕ ಮನೆಯ ಬಳಿ ಇದ್ದ ಹಾವು
ವರ್ಣದ್ರವ್ಯ ಗ್ರಂಥಿ ಕೊರತೆಯಿಂದ ಬಳಿ ಬಣ್ಣ
ಕಾರವಾರ : ತಾಲೂಕಿನ ಮಿರ್ಜಾನ್ ಬಳಿಯ ರಾಮನಗರದಲ್ಲಿ ಅಪರೂಪದ ಬಿಳಿ ಹೆಬ್ಬಾವೊಂದು ಪತ್ತೆಯಾಗಿದೆ. ಅದನ್ನು ಉರಗ ತಜ್ಞರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸುಬ್ರಹ್ಮಣ್ಯ ನಾಯ್ಕ ಅವರ ಮನೆಯ ಬಳಿ ಹಾವು ಪತ್ತೆಯಾಗಿದೆ.
ಆದ್ರೆ ಇದು ಯಾವ ಪ್ರಭೇದದ ಹಾವು ಎಂದು ಗುರುತಿಸಲಾಗದೇ ಸ್ಥಳೀಯರು ಗೊಂದಲಕ್ಕೆ ಈಡಾಗಿದ್ದರು.

ಈ ವಿಷಯ ತಿಳಿದ ಉರಗ ತಜ್ಞ ಪವನ್ ಎಂ. ನಾಯ್ಕ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಿಳಿ ಹೆಬ್ಬಾವು ಎಂದು ಖಾತ್ರಿಪಡಿಸಿದ್ದಾರೆ.
ಅಲ್ಲದೇ ಚರ್ಮಕ್ಕೆ ಬಣ್ಣ ನೀಡುವ ದ್ಯವ್ಯ ಗ್ರಂಥಿ ಅಂದರೆ ಮೆಲಾಲಿನ್ ಕೊರತೆಯಿಂದ ಹಾವುಗಳ ಬಣ್ಣ ಬಿಳಿಯಾಗುತ್ತದೆ.
ಹಾವನ್ನ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ ಎಂದು ಉರಗ ತಜ್ಞ ಪವನ್ ಎಂ ನಾಯ್ಕ ಅವರು ತಿಳಿಸಿದ್ದಾರೆ.








