ಹೆಡ್ ಲೈನ್ ಎಡವಟ್ಟು..!!!
ಹಾಯ್… ಗೆಳಯ … ( Dairy )
ತುಂಬಾ ದಿನಗಳ ನಂತರ ನನ್ನ ನಿನ್ನ ಭೇಟಿ..
ಇವತ್ತು ಕೆಲಸ ಮಾಡ್ತಾ ಮಾಡ್ತಾ ,,,, ಯಾವುದೋ ಆರ್ಟಿಕಲ್ ಗೆ ತಲೆ ಕೆಟ್ಟು ಇನ್ಯಾವುದೋ ಹೆಡ್ ಲೈನ್ ಹಾಕಿದ್ದೆ..
ಅದು ಬಿಡು ತಮಾಷೆ ಹೇಳ್ತಿನಿ ಕೇಳು…
ತಲೆಗೆ ಪ್ರೆಶರ್ ಬಿದ್ದಾಗ ಏನೇನಾಗುತ್ತೆ ಅಂತ..
ಪಾಪಿ ಪಾಕಿಸ್ತಾನ ಬರೆಯೋಳಿದ್ದೆ…
ಮೊದಲೆ ತಲೆ ಕೆಟ್ಟು ಗೊಬ್ಬರವಾದಾಗ ಕೊಲೀಗ್ ಮಾತನಾಡಿಸಿದ್ರು..
ಅವರ ಹೆಸರು ಬಂದು ಪ್ರತಾಪ…
ಹೊರಗೋ ಮಕ್ಕಳು ಕಿರುಚಾಡ್ತಾ ಇದ್ದ ಸೌಂಡ್.. ಅಲ್ಲಿನ ಇಂಚಾರ್ಜ್ ಮಕ್ಕಳು..
ನನಗೆ ಬರೆಯುವಾಗ ಸೈಲೆನ್ಸ್ ಇಲ್ಲ ಅಂದ್ರೆ ಕೆಟ್ಟು ಕೋಪ..
+ ತಲೆ ಕೆಲಸ ಮಾಡೋದಿಲ್ಲ.
ಗೊಬ್ಬರವಾಗಿರುತ್ತೆ..
ಹಾ… ಪ್ರತಾಪ್ ಸರ್…!! ಬೇರೆ ಈಗಲೇ ಮಾತನಾಡಿಸುತ್ತಾ ಏನೋ ಹೇಳಬೇಕಿತ್ತು..
ನಾನು ಬರೆಯೋದು ಬರೆದೆ ಹೆಡ್ ಲೈನ್ ಹಾಕಿದೆ ಎಲ್ಲಾ ಆಯ್ತು ಸರಿ ಇನ್ನೇನಿದೆ… ಮುಗೀತು ಪಬ್ಲಿಶ್ ಕೊಟ್ಟು ಕೂತೆ ನೆಮ್ಮದಿಯಾಗಿ ಕಾಫಿ ಕುಡಿಯೋಣ ಅಂತ…
ಕಾಫಿ ಒಂದ್ ಸಿಪ್ ಅಷ್ಟೇ ತೆಗದುಕೊಂಡಿದ್ದು.. ಬಂದ್ರು ಚೀಫ್ …
ನಮ್ರತಾ ನಿನ್ನ ಐಡಿಲಿ ನೀನೇ ಸ್ಟೋರಿ ಹಾಕಿದ್ದಾ , ಬೇರೆ ಅವರು ನಿನ್ನ ಐಡಿಲಿ ಲಾಗಿನ್ ಆಗಿದ್ದಾರಾ ಅಂದ್ರು..
ನಾನು ಟೆನ್ಷನ್ ನಲ್ಲಿ ಇಲ್ಲ ಸರ್ ಯಾಕ್ ಏನಾಯ್ತು ಎಂದೆ..
ಸರ್ ಏನಾಯ್ತು ನಿನ್ ತಲೆ ಅಲ್ಲಮ್ಮಾ ಪಾಪ ಆ ಹುಡುಗ ಪ್ರತಾಪನ್ನ ಯಾಕಮ್ಮ ಪಾಪಿ ಮಾಡಿಟ್ಟಿದ್ಯಾ..??
ಎಂದಾಗ ನನಗೆ ಶಾಕ್…!!!
ಪ್ರತಾಪ್ ಸರ್ ಶಾಕ್..!!
ಎಲ್ಲರೂ ಶಾಕ್.. ಎಲ್ಲಾ ಹೋಗಿ ಹೆಡ್ ಲೈನ್ ಚೆಕ್ ಮಾಡಿದ್ರೂ ನಾನೂ ಕೂಡ..
ಹೆಡ್ ಲೈನ್ ಬರಿ ಪಾಪಿ ಪ್ರತಾಪ ಅಂತ ಇದ್ದಿದ್ರೆ ಓಕೆ ಬಿಡು ಎನ್ನಬಹುದಿತ್ತೇನೋ..
ಆದ್ರೆ ಅಲ್ಲಿರಬೇಕಿದ್ಧ ಹೆಡ್ ಲೈನ್..
ಅದಪಥನದತ್ತ ಪಾಪಿ ಪಾಕಿಸ್ತಾನದ
ನಾನು ಬರೆದದ್ದು
‘ಅದಪಥನದತ್ತ ಪಾಪಿ ಪ್ರತಾಪ’
ನಾನು ತಲೆ ಮೇಲೆ ಕೈ ಇಟ್ಟುಕೊಂಡು ಪ್ರತಾಪ ಅವರ ಕಡೆ ತಿರುಗಿ ಸಾರಿ ಸರ್ ಎಂದೆ..
ಆದರೆ ನನ್ನ ಬಿಕಾರಿ ಮಾಡಿಬಿಟ್ಯಲಮ್ಮ ಅನ್ನುವ ಅವರ ಆ ಒಂದು ಮಾತಿಗೆ ಇಡೀ ಆಫೀಸ್ ಅಲ್ಲಿದ್ದವರೆಲ್ಲಾ ನಕ್ಕಿದ್ದೀವಿ ಖುದ್ದು ಪ್ರತಾಪ್ ಸರ್ ಸಹ…
ಆಮೇಲೆ ಆರ್ಟಿಕಲ್ ಎಡಿಟ್ ಮಾಡಿ ರೀಪಬ್ಲಿಷ್ ಮಾಡಬೇಕಾಯ್ತು..
ಪುಣ್ಯ ಕಾಮಿಡಿಯಾಗಿ ತಗೊಂಡ್ರು.. ಇಲ್ಲ ಯೋಚಿಸು ನೀನೇ ಗೆಳೆಯ ( Dairy ) ಹೇಗಿರುತಿತ್ತು ನನ್ನ ಪರಿಸ್ಥಿತಿ…
ಇದರಲ್ಲಾದ್ರೂ ಹೋಗಲಿ ಇಂಟರ್ ವೀವ್ ನಲ್ಲಿ ಹೆಸರು ಹೇಳಲ್ಲ ಯಾರಂತ.. ಟಿವಿ ಸೀರಿಯಲ್ ನಟಿ ಬಳಿ ಮಾತನಾಡುವಾಗ ರೆಕಾರ್ಡ್ ನಡೆಯುತಿತ್ತು ಪಾಪ ಅವರ ಹೆಸರನ್ನೇ ತಪ್ಪಾಗಿ ತೆಗೆದು ಅವರಿಗೂ ಮುಜುಗರವಾಗುವಂತೆ ಮಾಡಿದ್ದೆ.. ಏನ್ ಹೇಳಲಿ ನನ್ನ ಎಡವಟ್ಟುಗಳು ಒಂದ ಎರಡಾ.. ನಮ್ಮಪ್ಪ ಅಮ್ಮ ಅದ್ಹೇಗೆ ನನ್ನ ಸಹಿಸಿಕೊಂಡಿದ್ದಾರೋ..
ಬಿಡು ಹೋಗಲಿ ಯಾರ್ ಸಹಿಸಿಕೊಳ್ತರೋ ಇಲ್ವೋ ಗೊತ್ತಿಲ್ಲ.. ನೀನು ಸಹಿಸಿಕೊಳ್ತ್ಯಾ..
ಅಲ್ಲ ನನಗೆ ಗೊತ್ತು ನಿನ್ನ ಮನಸಲ್ಲಿ ( ನನಗೆ ಬೇರೆ ಆಪ್ಷನ್ ಎಲ್ಲಿದೆ ) ಅಂತ ಬೈಕೋತಿರುತ್ತೀಯಾ ಅಲ್ವಾ.. ಬೈಕೋ ಪರವಾಗಿಲ್ಲ.. ನನಗೆ ನೀನು ಬೈಕೊಂಡರೂ ಬೇಜಾರಿಲ್ಲ..
– ನಿಹಾರಿಕಾ ರಾವ್ –