MB Patil | ನಮ್ಮ ನಾಡಿನ ನಾಯಕರ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡಿ
ವಿಜಯಪುರ : ವಿವಾದಾತ್ಮಕ ವ್ಯಕ್ತಿಯ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡುವ ಬದಲಿಗೆ ನಮ್ಮ ನಾಡಿನ ನಾಯಕರ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡಿ ಎಂದು ಕೆಪಿಸಿಸಿ ಪ್ರವಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ವಿವಾದಾತ್ಮಕ ವ್ಯಕ್ತಿಯ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡುವ ಬದಲಿಗೆ ನಮ್ಮ ನಾಡಿನ ನಾಯಕರ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡಿ. ಇವರ ರಥಯಾತ್ರೆಗೆ ಬೇರೆಯವರ ಫೋಟೋ ಯಾಕೆ ಹಾಕಿಕೊಳ್ಳುತ್ತೀರಾ.

ನಮ್ಮ ಕನ್ನಡ ನಾಡಿನಲ್ಲಿ ಬ್ರಿಟಿಷರ್ ವಿರುದ್ದ ಹೋರಾಡಿದ ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರ ನಾಯಕರು ಇವರ ಫೋಟೋ ಹಾಕಿಕೊಂಡು ರಥಯಾತ್ರೆ ಮಾಡಿ. ವಿವಾದಾತ್ಮಕ ವ್ಯಕ್ತಿಯ ಫೋಟೋ ಮೊದಲು ತೆಗೆದು, ನಮ್ಮ ನಾಡಿನ ನಾಯಕರ ಫೋಟೋ ಹಾಕಿಕೊಂಡು ರಥಯಾತ್ರೆ ಮಾಡಿ ಆ ರಥ ಯಾತ್ರೆಗೆ ನಾವು ಬರುತ್ತೇವೆ ಎಂದು ತಿಳಿಸಿದರು.
ಇವರಿಗೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಹಲಗಲಿ ಬೇಡರು ಬೇಕಾಗಿಲ್ಲ, ಸುರಪುರ ನಾಯಕರು ಬೇಕಾಗಿಲ್ಲ. ಬಿಜೆಪಿಯವರಿಗೆ ಕಾಂಟ್ರವರ್ಸಿ ಮಾತ್ರ ಬೇಕಾಗಿದೆ. ನಮ್ಮ ನಾಡಿನ ನಾಯಕರನ್ನು ಗೌರವಿಸುವ ಕೆಲಸ ಅವರು ಮಾಡದಿದ್ದರೆ ನಾವು ಮಾಡುತ್ತೇವೆ. ಇಂತವರಿಗೆ ಗೌರವ ಸಲ್ಲಿಸುವ ಕೆಲಸವನ್ನು ನಾವು ಕಾಂಗ್ರೆಸ್ ಪಕ್ಷದಿಂದ ಮಾಡುತ್ತೇವೆ ಎಂದು ಹೇಳಿದರು.








