ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಗೌರವ ಸಿಕ್ಕಿದೆ. ರಿಲೀಸ್ ಗೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಕಬ್ಜ ಸೌಂಡು ಜೋರಾಗಿದೆ. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಟಾಪ್ ಟೆನ್ ಸಿನಿಮಾಗಳಲ್ಲಿ ಕಬ್ಜಾಗೆ ಸ್ಥಾನ ದೊರಕಿರೋದೆ ಇದಕ್ಕೆ ಸಾಕ್ಷಿ. ಕೇವಲ ಚಿತ್ರೀಕರಣ ಹಂತದಲ್ಲೇ ಕಬ್ಜ ಈ ಪಾಟಿ ಹವಾ ಸೃಷ್ಟಿಸೋಕೆ ಕಾರಣ ನಿರ್ದೇಶಕ ಆರ್. ಚಂದ್ರು.
ಹೌದು..!
ಆರ್.ಚಂದ್ರು, ಶ್ರದ್ಧೆ, ಅಚ್ಚುಕಟ್ಟುತನ ಮತ್ತು ಕ್ರಿಯೇಟಿವಿಟಿಗೆ ಹೆಸರಾದ ನಿರ್ದೇಶಕ. ವರ್ಷಕ್ಕೊಂದು ಚಿತ್ರ ಮಾಡಿದರೂ ಅದು ವರ್ಷದ ಚಿತ್ರವಾಗಿ ದಾಖಲಾಗುವಂಥಾ ಚೆಂದದ ದೃಶ್ಯಕಾವ್ಯಗಳೇ ಅವರ ಬತ್ತಳಿಕೆಯಲ್ಲಿವೆ. ಯುವ ಸಮೂಹವನ್ನು ಸೆಳೆಯುವಂಥಾ ಕಥೆಯೊಂದನ್ನು ಫ್ಯಾಮಿಲಿ ಸಮೇತ ಕೂತು ನೋಡುವಂತೆ ಕಟ್ಟಿ ಕೊಡುವುದೂ ಒಂದು ಕಲೆಗಾರಿಕೆ. ಅದು ಕೆಲವೇ ಕೆಲ ನಿರ್ದೇಶಕರಿಗೆ ಮಾತ್ರವೇ ಸಿದ್ಧಿಸಿರುತ್ತದೆ. ಆ ಸಾಲಿನಲ್ಲಿ ಆರ್.ಚಂದ್ರು ಕೂಡಾ ಒಬ್ಬರು.
ಅವರ ಸಿನಿಮಾಗಳು ಜನರನ್ನು ಯೋಚಿಸುವಂತೆ ಮಾಡುತ್ತವೆ. ಅವರ ಸಿನಿಮಾಗಳು ಎಷ್ಟೋ ಜನರಿಗೆ ಸ್ಫೂರ್ತಿ. ಜೀವನದಲ್ಲಿ ನೊಂದು ಬೆಂದು ಮಂಕಾಗಿರುವ ಹೃದಯಗಳಿಗೆ ಚಂದ್ರು ಅವರ ಸಿನಿಮಾಗಳು ಹೊಸ ಚೈತನ್ಯ ನೀಡುತ್ತವೆ. ಹೀಗಾಗಿ ಆರ್. ಚಂದ್ರು ಅವರ ಸಿನಿಮಾಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಕೈ ಬಿಸಿ ಕರೆಯುತ್ತವೆ.
ಇದೇ ಕಾರಣಕ್ಕೆ ಚಂದ್ರು ಅವರ ಸಿನಿಮಾಗಳು ಬಾಕ್ಸ್ ಆಫೀಲ್ ನಲ್ಲಿ ತುಸು ಜೋರಾಗಿಯೇ ಸದ್ದು ಮಾಡುತ್ತವೆ.
ಇನ್ನು ಕಬ್ಜ ಸಿನಿಮಾ ವಿಚಾರಕ್ಕೆ ಬಂದ್ರೆ ಈವರೆಗೆ ಚಂದ್ರು ಸುಮಾರು 14 ರಿಂದ 15 ಚಿತ್ರಗಳನ್ನು ಮಾಡಿದ್ದರೂ ಆ ಎಲ್ಲಾ ಚಿತ್ರಗಳನ್ನು ಒಂದು ಕಡೆ ಇಟ್ಟರೆ ಕಬ್ಜ ಚಿತ್ರವೇ ಹೆಚ್ಚು ತೂಗುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಕಬ್ಜ ಆರ್.ಚಂದ್ರು ಅವರ ಐದು ವರ್ಷಗಳ ಕನಸು. ಕನ್ನಡ, ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಅದರಲ್ಲೂ ಚಿತ್ರಕ್ಕಾಗಿ ಚಂದ್ರು ಸಖತ್ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ಇದು ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳಲ್ಲಿ ನಾವು ಕಾಣಬಹುದಾಗಿದೆ. ನಿರ್ದೇಶಕ ಆರ್.ಚಂದ್ರು ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ಮತ್ತೊಮ್ಮೆ ತಿರುಗಿ ನೋಡುವಂಥ ಚಿತ್ರವನ್ನಾಗಿ ಕಬ್ಜವನ್ನು ರೂಪಿಸಲು ಹೊರಟಿದ್ದಾರೆ .
ಕಬ್ಜ ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಬಹುಶಃ ಮುಂದೆ ಯಾರೂ ಇಂಥ ಪ್ರಯತ್ನಕ್ಕೆ ಕೈ ಹಾಕಲಾರರು. ಇದೇ ಮೊದಲು ಎನ್ನುವಂತೆ, ಇದೇ ಕೊನೆ ಎನ್ನುವಂಥ ಅಭೂತಪೂರ್ವ ದಾಖಲೆಗೆ ಕಾರಣವಾಗುವ ಚಿತ್ರ ಆಗಲಿದೆ ಎಂಬ ಮಾತು ಚಿತ್ರತಂಡದಿಂದ ಕೇಳಿಬರುತ್ತಿದೆ .
ಒಟ್ಟಾರೆ ತಾಜ್ ಮಹಲ್ ಮೂಲಕ ಪ್ರೇಮ್ ಕಹಾನಿ ಹೇಳಿ ಪ್ರೀತಿಯ ಮಳೆ ಸುರಿದ ಚಂದ್ರು, ಈಗ ಬ್ರಹ್ಮ ನೊಂದಿಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನ ಕಬ್ಚ ಮಾಡೋಕೆ ಹೊರಟ್ಟಿದ್ದಾರೆ. ಇದರ ಮಧ್ಯೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಟಾಪ್ ಟೆನ್ ಸಿನಿಮಾಗಳ ಲಿಸ್ಟ್ ನಲ್ಲಿ ತಮ್ಮ ಸಿನಿಮಾ ಗುರುತಿಸಿಕೊಂಡಿರುವುದು ಚಿತ್ರತಂಡಕ್ಕೆ ಬೂಸ್ಟ್ ನೀಡಿದಂತಾಗಿದೆ.