ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಗರ್ಭಿಣಿ ಆನೆಯೊಂದನ್ನು ಅಮಾನುಷವಾಗಿ ಸಾಯಿಸುವಂತೆ ಮಾಡಲಾಗಿತ್ತು. ಸ್ಫೋಟಕ ಪಟಾಕಿಗಳನ್ನು ಅನಾನಸ್ ನಲ್ಲಿ ಆನೆಗೆ ತಿನ್ನಲು ಕೊಟ್ಟಿದ್ದರು. ಹೀಗಾಗಿ ಪಟಾಕಿ ಸ್ಪೋಟಗೊಂಡ ಕಾರಣ ಆನೆಯ ಬಾಯಿ ಗಾಯಗೊಂಡಿದ್ದು, ಕೊನೆಗೆ ನೋವು ತಡೆದುಕೊಳ್ಳಲು ಸಾಧ್ಯವಾಗದೇ ನೀರಿನಲ್ಲಿ ನಿಂತುಕೊಂಡು ಪ್ರಾಣ ಬಿಟ್ಟಿತ್ತು.
ಈ ಬಗ್ಗೆ ಈಗ ದೇಶಾದ್ಯಂತ ಆಕ್ರೋಶದ ಮಾತುಗಳು ಕೇಳಬರತ್ತಿವೆ. ಇದಕ್ಕೆ ಈಗ ಕ್ರೀಡಾಪಟುಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಮಾನವಿಯತೆಯನ್ನು ಮರೆತ ಜನರು ರಾಕ್ಷಸ ಪ್ರವೃತ್ತಿಯನ್ನು ತೋರಿಸಿದ್ದಾರೆ. ಇದೊಂದು ಅವಮಾನವಿಯ ಕೃತ್ಯ ಅಂತ ಹೇಳಿದ್ದಾರೆ.
ಆ ಹೆಣ್ಣಾನೆ ಯಾರಿಗೂ ಏನು ತೊಂದರೆ ಮಾಡಿರಲಿಲ್ಲ. ಜನರು ಕೊಟ್ಟಿರುವ ಆನಾನಸ್ ಅನ್ನು ಪ್ರೀತಿಯಿಂದಲೇ ತಿಂದಿತ್ತು. ಜನರ ಮೇಲೆ ನಂಬಿಕೆ ಇಟ್ಟುಕೊಂಡು ಆನೆ ಆಹಾರವನ್ನು ತಿಂದಿತ್ತು. ಆದ್ರೆ ಜನರ ಘನ ಘೋರ ಮನಸ್ಥಿತಿ ಪಾಪ ಆ ಹೆಣ್ಣಾನೆಗೆ ಗೊತ್ತೆ ಆಗಲಿಲ್ಲ. ಪಟಾಕಿ ತನ್ನ ಬಾಯಿ ಮತ್ತು ಹೊಟ್ಟೆಯೊಳಗೆ ಸ್ಪೋಟಗೊಂಡ ಜನ ಯಾವ ರೀತಿ ವಿಶ್ವಾಸ ಘಾತಕ ಮಾಡಿದ್ದರು ಎಂಬುದು ಆ ಹೆಣ್ಣಾನೆ ಅರ್ಥವಾಗಿಬಿಟ್ಟಿತ್ತು. ಆದ್ರೂ ಆ ಹೆಣ್ಣಾನೆ ಅಲ್ಲಿನ ಜನರಿಗೆ ಏನು ತೊಂದರೆ ಮಾಡಿರಲಿಲ್ಲ. ನೋವನ್ನು ಕಷ್ಟಪಟ್ಟು ಸಹಿಸಿಕೊಂಡಿತ್ತು. ಗಾಯದ ಮೇಲೆ ನೋಣಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಕೊನೆಗೆ ನೀರಿನ ಮೊರೆ ಹೋದ್ರು ಆನೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ಬಗ್ಗೆ ಭಾರತದ ಕ್ರೀಡಾಪಟುಗಳು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಈ ಘಟನೆಯನ್ನು ಖಂಡಿಸಿದ್ದಾರೆ. ಅದ್ರಲ್ಲೂ ಮುಖ್ಯವಾಗಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೇರಳದಲ್ಲಿ ನಡೆದ ಘಟನೆಯನ್ನು ಕೇಳಿ ದಿಗಿಲುಗೊಂಡಿದ್ದೇನೆ. ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ. ಆದ್ರೆ ಈ ಇಂತಹ ಹೇಡಿತನದ ಕೃತ್ಯಗಳಿಗೆ ಅಂತ್ಯ ಹಾಡೋಣ ಅಂತ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇನ್ನು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಪೀಪಲ್ ಫಾರ್ ಅನಿಮಲ್ಸ್ ಇಂಡಿಯಾದ ಪೋಸ್ಟ್ಗೆ ಕ್ರೂರತೆಯ ಬಗ್ಗೆ ಉತ್ತರಿಸುವ ಮೂಲಕ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಕೇಳಿ ತಿಳಿದಾಗ ತುಂಬಾ ದುಃಖವಾಗಿತ್ತು ಅಂತ ಹೇಳಿದ್ದಾರೆ.
ಪಾಪ ಅದು ಗರ್ಭಿಣಿ ಆನೆ. ಜನರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡಲಿಲ್ಲ. ಜನ ಮಾಡಿರುವ ಕೃತ್ಯ ಮಾತ್ರವನ್ನು ಸಹಿಸಲು ಸಾಧ್ಯವಿಲ್ಲ. ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ನಾವು ಪ್ರಕೃತಿಯ ವಿರುದ್ಧವೇ ಮತ್ತೆ ಮತ್ತೆ ಹೋಗುತ್ತಿದ್ದೇವೆ ಎಂದು ಭಾರತ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಹೇಳಿದ್ದಾರೆ.
ಹಾಗೇ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಇದೊಂದು ರಕ್ಕಸ ಪ್ರವೃತ್ತಿಯದ್ದು. ತಿನ್ನುವ ಅನಾನಸ್ ನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಗೆ ಕೊಟ್ಟಿರುವುದು ಮನುಷ್ಯತ್ವವೇ ಇಲ್ಲದವರು. ಕ್ರೂರಿಗಳು ಮಾತ್ರ ಇದನ್ನು ಮಾಡಲು ಸಾಧ್ಯ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಎಂದು ಉಮೇಶ್ ಯಾದವ್ ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಹರ್ಭಜನ್ ಸಿಂಗ್ ಕೂಡ ಈ ಕೃತ್ಯದ ವಿರುದ್ಧ ಆಕ್ರೊಶವಾಗಿಯೇ ಟ್ವಿಟ್ ಮಾಡಿದ್ದಾರೆ. ಇನ್ನು
ಒಲಿಂಪಿಯನ್ ಶೂಟರ್ ಹೀನಾ ಸಿಧೂ ಸೇರಿದಂತೆ ಅನೇಕ ಕ್ರೀಡಾಪಟುಗಳು ಈ ರಕ್ಕಸ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.








