Harish Rai | ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ KGF ನಟ
ನಟ ಹರೀಶ್ ರೈ ಗೆ ಅನಾರೋಗ್ಯ ಸಮಸ್ಯೆ
ಕ್ಯಾನ್ಸರ್ ನಿಂದ ಕಣ್ಣೀರಾಕಿದ ಹರೀಶ್ ರೈ
ಹರೀಶ್ ರೈ ಚಿಕಿತ್ಸೆಗೆ ಹಣದ ಅನಿವಾರ್ಯತೆ
ಕೆಜಿಎಫ್ ಸಿನಿಮಾದ ಚಾಚಾ ಹರೀಶ್ ರೈ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸಹಾಯ ಹಸ್ತ ಬೇಕಾಗಿದೆ. ಹರೀಶ್ ರೈ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಅವರಿಗೆ ಕ್ಯಾನ್ಸರ್ ನಾಲ್ಕನೇ ಸ್ಟೇಜ್ ನಲ್ಲಿದ್ದು, ಮೂರು ವರ್ಷ ಹೆದರಬೇಡಿ ಎಂದು ಡಾಕ್ಟರ್ ಹೇಳಿದ್ದಾರಂತೆ. ಈ ಬಗ್ಗೆ ಹರೀಶ್ ರೈ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡಿದ್ದು, ವೈದ್ಯರು ನಾಲ್ಕನೇ ಸ್ಟೇಜ್ ನಲ್ಲಿದೆ ಎಂದಿದ್ದಾರೆ.
ಇನ್ನು ನನಗೆ ಎಷ್ಟು ಟೈಮ್ ಇದೆ ಅಂತಾ ಕೇಳಿದೆ, ಮೂರು ವರ್ಷ ಅಂತಾ ಹೇಳಿದ್ದಾರೆ. ರೆಡಿಯೋ ಥೆರಪಿ ವರ್ಕ್ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ.
ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8 – 10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತಾ ವೈದ್ಯರು ಹೇಳಿದ್ದಾರೆ ಎಂದು ಹರೀಶ್ ರೈ ಮಾತನಾಡಿದ್ದಾರೆ.
ಕೆಜಿಎಫ್ 2 ಸಿನಿಮಾ ಶೂಟಿಂಗ್ ವೇಳೆ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ನಾನು ಶೂಟಿಂಗ್ ಮಾಡಿದೆ. ಫೈಟಿಂಗ್ ಸೀನ್ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ.
ನಾನೇ ಮುಚ್ಚುಮರೆ ಮಾಡಿದೆ. ಈ ಸಮಸ್ಯೆ ಗೊತ್ತಾದರೇ ಆಫರ್ ಬರುವುದಿಲ್ಲ ಅಂತಾ ಭಯ ಆಯ್ತು. ಇದೇ ಕಾರಣಕ್ಕೆ ನಾನು ಕೆಜಿಎಫ್ 2 ಬಳಿಕ ಸಂದರ್ಶನ ಕೊಟ್ಟಿಲ್ಲ.
ಈಗ ಕೆಲವು ಸ್ಟಾರ್ ಕಲಾವಿದರು ಅವರು ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳು ಇಚ್ಚಿಸಿದೇ, ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಅಂತಾ ಹರೀಶ್ ರೈ ಮಾಹಿತಿ ನೀಡಿದ್ದಾರೆ.








