Former CM B S Yediyurappa | ದೆಹಲಿಗೆ ಬಿಎಸ್ ವೈ : ಬಿಗ್ ಬಾಸ್ ಗಳ ಭೇಟಿ
ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ಪಯಣ ಬೆಳೆಸಿದ್ದಾರೆ.
ಬಿಜೆಪಿಯಲ್ಲಿ ಅಗ್ರಸ್ಥಾನಮಾನ ಪಡೆದ ಬಳಿಕ ಮೊದಲ ಬಾರಿಗೆ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಅವರು ಇಂದು ಮತ್ತು ನಾಳೆ ಅವರು ದೆಹಲಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.ದೆಹಲಿ ಪ್ರವಾಸಕ್ಕೂ ಮುನ್ನಾ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಈಗ ದೆಹಲಿಗೆ ಹೋಗುತ್ತಿದ್ದು ಸಂಜೆ ಪ್ರಧಾನಿ ಮೋದಿ ಸೇರಿದಂತೆ ಬೇರೆ ನಾಯಕರನ್ನು ಭೇಟಿ ಮಾಡುತ್ತೇನೆ.
ನಾಳೆ ಸಾಯಂಕಾಲದವರೆಗೂ ಅಲ್ಲಿದ್ದು ಮುಂದೆ ಏನು ಕೆಲಸ ಮಾಡಬೇಕೆಂದು ಸಲಹೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ನಾಳೆ ಸಂಜೆ ವಾಪಸ್ ಬರಬೇಕು ಎಂದುಕೊಂಡಿದ್ದೇನೆ . ಇವತ್ತು ಮತ್ತು ನಾಳೆ ನಾನು ದೆಹಲಿಯಲ್ಲಿಯೇ ಇರುತ್ತೇನೆ.
ಮುಂದೆ ಏನು ಕೆಲಸ ಮಾಡಬೇಕು ಎಂದು ಅವರ ಸಲಹೆ ಕೇಳುವುದು ನನ್ನ ಕರ್ತವ್ಯ. ದತ್ತಾತ್ರೇಯ ಹೊಸ ಬಾಳೆ ಅವರನ್ನು ಭೇಟಿಯಾಗಲು ಪ್ರಯತ್ನಪಡುತ್ತೇನೆ ಎಂದು ತಿಳಿಸಿದರು.








