Google Play Store: ಲೋನ್ ಅಪ್ಲಿಕೇಶನ್ ಗಳಿಗೆ ಗೂಗಲ್ ನಿರ್ಬಂಧ – 2 ಸಾವಿರ ಅಪ್ಲಿಕೇಷನ್ ಡಿಲಿಟ್….
ಇತ್ತೀಚಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲೋನ್ ನೀಡುವ ಅಪ್ಲಿಕೇಷನ್ ಗಳ ಭರಾಟೆ ಹೆಚ್ಚಾಗುತ್ತಿದೆ. ತುರ್ತು ಪರಿಸ್ಥಿಯಲ್ಲಿ ಹಣ ಬೇಕಾದವರು ಈ ಅಪ್ಲಿಕೇಷನ್ ಗಳ ಮೂಲಕ ಹಣ ಪಡೆದುಕೊಂಡು ನಂತರ ನಾನಾ ಸಂಕಷ್ಟಕ್ಕೆ ಹೀಡಾಗುತ್ತಿದ್ದಾರೆ. ಕೆಲವೊಮ್ಮೆ ಸಾಲ ಪಡೆದವರ ಕುರಿತು ಅಪಪ್ರಚಾರದಂತಹ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಬೆದರಿಕೆಗಳನ್ನ ಎದುರಿಸುತ್ತಿದ್ದಾರೆ..
ಈಗಾಗಿ ಆನ್ ಲೈನ್ ವಂಚನೆಗಳನ್ನ ತಡೆಯಲು ಗೂಗಲ್ ದೈತ್ಯ ಮುಂದಾಗಿದೆ. ಪ್ಲೇ ಸ್ಟೋರ್ ನ ಕೆಲವೊಂದು ನಿಯಮಗಳನ್ನ ಮುರಿದಿದ್ದಕ್ಕಾಗಿ 2000 ಲೋನ್ ಅಪ್ಲಿಕೇಷನ್ ಗಳನ್ನ ಗೂಗಲ್ ಪ್ಲೇಸ್ಟೋರ್ ನಿಂದ ತೆಗದುಹಾಕಿದೆ. ವಯಕ್ತಿಕ ಲೋನ್ ನೀಡುವ ಅಪ್ಲಿಕೇಷನ್ ಗಳನ್ನ ಜುಲೈ ವರೆಗೆ ನಿರ್ಬಂಧಿಸಲಾಗಿದೆ.
ಈ ವರ್ಷ ಜನವರಿಯಿಂದ ಭಾರತದಲ್ಲಿ ಪ್ಲೇ ಸ್ಟೋರ್ ನಿಂದ ಸಾಲ ನೀಡುವ ಎರಡು ಸಾವಿರಕ್ಕೂ ಹೆಚ್ಚು ಆ್ಯಪ್ ಗಳನ್ನು ಕಂಪನಿ ತೆಗೆದು ಹಾಕಿದೆ. ಇಂತಹ ಆ್ಯಪ್ಗಳಿಂದ ಬಹುತೇಕರು ಮೋಸ ಹೋಗಿರುವುದನ್ನು ಕಾಣಬಹುದಾಗಿದೆ. ಷರತ್ತುಗಳ ಉಲ್ಲಂಘನೆ, ಮಾಹಿತಿಯ ತಪ್ಪು ನಿರೂಪಣೆ ಮತ್ತು ಆಫ್ಲೈನ್ ನಡವಳಿಕೆಯು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಆನ್ಲೈನ್ ವಂಚನೆಯನ್ನು ತಡೆಯಲು ಸಾಕಷ್ಟು ಪ್ರಯತ್ನಗಳನ್ನ ತೆಗೆದುಕೊಳ್ಳಲಾಗುತ್ತಿದೆ. ಗೂಗಲ್ನ ಆದ್ಯತೆ ಮತ್ತು ಅದರ ಗಮನವು ಯಾವಾಗಲೂ ಬಳಕೆದಾರರ ಸುರಕ್ಷತೆಯ ಸುತ್ತ ಇರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.