ಸೋನಾಲಿ ಪೋಗಾಟ್ ಗೆ ಬಲವಂತವಾಗಿ ಮಾದಕ ದ್ರವ್ಯ ನೀಡಿ ಕೊಲೆ ??
ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ಸೋನಾಲಿಗೆ ಪಿಎ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಬಲವಂತವಾಗಿ ಡ್ರಗ್ಸ್ ನೀಡಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಈ ವಿಷಯವನ್ನ ಗೋವಾ ಪೊಲೀಸರ ಮುಂದೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಗೋವಾ ಡಿಜಿಪಿ ಜಸ್ಪಾಲ್ ಸಿಂಗ್ ನೀಡಿರುವ ಹೇಳಿಕೆಯ ಪ್ರಕಾರ. ಆಗಸ್ಟ್ 22 ರ ರಾತ್ರಿ ತಾವು ಸೋನಾಲಿಗೆ ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದೇವೆ ಎಂದು ಸುಧೀರ್ ಮತ್ತು ಸುಖ್ವಿಂದರ್ ಒಪ್ಪಿಕೊಂಡಿದ್ದಾರೆ. ದ್ರವದಲ್ಲಿ ಬರೆಸಿ ನಿಡಲಾಗಿದೆ. ಮಾದಕ ದ್ರವ್ಯದಿಂದ ಸೋನಾಲಿ ಆರೋಗ್ಯ ಹದಗೆಟ್ಟಾಗ ಇಬ್ಬರೂ ಅವಳನ್ನ ವಾಶ್ರೂಮ್ ಗೆ ಕರೆದುಕೊಂಡು ಹೋಗಿದ್ದಾರೆ. ಇಬ್ಬರು ಸೊನಾಲಿಯೊಂದಿಗೆ ವಾಶ್ ರೂಮ್ ನಲ್ಲಿ ಎರಡು ಗಂಟೆಗಳ ಕಾಲ ಕುಳಿತಿದ್ದಾರೆ.
ಕ್ಲಬ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುಧೀರ್ ಸಾಂಗ್ವಾನ್ ಸೋನಾಲಿಗೆ ಬಾಟಲಿಯಲ್ಲಿರಾಸಯನಿಕ ಬೆರೆಸುತ್ತಿರುವ ವಿಡಿಯೋ ಪೊಲೀಸರಿಗೆ ಸಿಕ್ಕಿವೆ ಎಂದು ಗೋವಾ ಡಿಜಿಪಿ ತಿಳಿಸಿದ್ದಾರೆ.








