IND vs PAK: ಏಷ್ಯಾಕಪ್ ನಲ್ಲಿ 8 ವರ್ಷಳಿಂದ ಪಾಕ್ ಎದುರು ಸೋತಿಲ್ಲ ಇಂಡಿಯಾ…
10 ತಿಂಗಳ ಸುದೀರ್ಘ ಅಂತರದ ಬಳಿಕ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇಂದು ರಾತ್ರಿ 7:30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡೂ ತಂಡಗಳ ಹಣಾಹಣಿಗೆ ಸಿದ್ದವಾಗುತ್ತಿದೆ. ಇದಕ್ಕೂ ಮೊದಲು, ಎರಡೂ ತಂಡಗಳು 24 ಅಕ್ಟೋಬರ್ 2021 ರಂದು ಇದೇ ಮೈದಾನದಲ್ಲಿ T20 ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಪಾಕಿಸ್ತಾನ 10 ವಿಕೆಟ್‌ಗಳಿಂದ ಗೆದ್ದಿತ್ತು. ಭಾರತಕ್ಕೆ ಈ ಪಂದ್ಯ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ…
ಏಷ್ಯಾಕಪ್ ನಲ್ಲಿ ಪಾಕಿಸ್ತಾನ ತಂಡ 2014 ರಿಂದ ಭಾರತದ ವಿರುದ್ಧ ಯಾವುದೇ ಪಂದ್ಯವನ್ನ ಗೆದ್ದಿಲ್ಲ. ಪಾಕಿಸ್ತಾನ 2018ರ ಏಷ್ಯಾಕಪ್‌ನಲ್ಲಿ ಎರಡು ಬಾರಿ ಮತ್ತು 2016ರ ಟೂರ್ನಿಯಲ್ಲಿ ಒಂದು ಬಾರಿ ಭಾರತದ ಎದುರು ಸೋತಿತ್ತು. ಏಷ್ಯಾಕಪ್ ದಾಖಲೆಗಳ ಪ್ರಕಾರ ಆಡಿರುವ 14 ಪಂದ್ಯಗಳಲ್ಲಿ ಭಾರತ 8 ಪಂದ್ಯಗಳನ್ನ ಪಾಕಿಸ್ತಾನ 5 ಪಂದ್ಯಗಳನ್ನ ಗೆದ್ದುಕೊಂಡಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾಗಿದೆ.
ಮಳೆಯಾಗುವ ಸಾಧ್ಯತೆ ಇಲ್ಲ, ದೊಡ್ಡ ಸ್ಕೋರ್ ನಿರೀಕ್ಷೆ…
ಇವತ್ತಿನ ಪಂದ್ಯದಲ್ಲಿ ಮಳೆಯ ಸಾಧ್ಯತೆ ಕಡೆಮೆ ಇದೆ. ಹವಾಮಾನ ಸ್ಪಷ್ಟವಾಗಿರಲಿದ್ದು, ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.
ಇಂದಿನ ಪಂದ್ಯದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸ್ಕೋರ್ ನ್ನ ನಿರೀಕ್ಷಿಸಬಹುದು. ಆದರೂ ಸ್ವಿಂಗ್ ಮತ್ತು ಸೀಮ್ ಬೌಲರ್‌ಗಳು ಪಂದ್ಯದ ಮೊದಲ ಎರಡು-ಮೂರು ಓವರ್‌ಗಳಲ್ಲಿ ಸಹಾಯ ಪಡೆಯಬಹುದು. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅನೇಕ ಪವರ್ ಹಿಟ್ಟರ್‌ಗಳನ್ನು ಹೊಂದಿವೆ. ಹಾಗಾಗಿ ದೊಡ್ಡ ಮೊತ್ತ ಗಳಿಸುವ ಎಲ್ಲ ಅವಕಾಶಗಳೂ ಇವೆ.








