Andre Russell | 6 ಬಾಲ್ ನಲ್ಲಿ 6 ಸಿಕ್ಸ್ ಸಿಡಿಸಿದ ರಸೆಲ್
ಸಿಕ್ಸರ್ ಸಿಡಿಸಿ ದಾಖಲೆ ಬರೆದ ರಸೆಲ್
ಸಿಕ್ಸ್ಟಿ ಟಿ 10 ಲೀಗ್ ನಲ್ಲಿ ರಸೆಲ್ ಅಬ್ಬರ
ಟ್ರಿನಿಬಾಗೋ ನೈಟ್ ರೈಡರ್ಸ್ ಪರ ಆರ್ಭಟ
ಸೇಯಿಂಟ್ ಕಿಟ್ಸ್ ವಿರುದ್ಧ ರಸೆಲ್ ರೌದ್ರಾವತಾರ
ವೆಸ್ಟ್ ಇಂಡೀಸ್ ನ ಸಿಕ್ಸ್ಟಿ ಟಿ 10 ಲೀಗ್ ನಲ್ಲಿ ಆಂಡ್ರ್ಯೂ ರಸೆಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಟ್ರಿನಿಬಾಗೋ ನೈಟ್ ರೈಡರ್ಸ್ ತಂಡದ ಪರ ರಸೆಲ್ ಆರು ಬಾಲ್ ಗಳಲ್ಲಿ ಆರು ಸಿಕ್ಸರ್ ಗಳನ್ನು ಚಚ್ಚಿದ್ದಾರೆ.
ರಸೆಲ್ ಬ್ಯಾಟಿಂಗ್ ವೇಳೆ ಸೇಯಿಂಟ್ ಕಿಟ್ಸ್ ತಂಡದ ಡೊಮಾನಿಕ್ ಡ್ರೇಕ್ಸ್ 5 ನೇ ಓವರ್ ಬೌಲಿಂಗ್ ಮಾಡಿದರು.
ಈ ಓವರ್ ನ ಕೊನೆಯ ನಾಲ್ಕು ಎಸೆತಗಳನ್ನು ರಸೆಲ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಗಟ್ಟಿದರು.

ನಂತರ ಆರನೇ ಓವರ್ ನಲ್ಲಿ ಜಾನ್ ರಸ್ ಜಗ್ಗೇಸರ್ ಓವರ್ ನ ಮೊದಲೆರಡು ಬಾಲ್ ಗಳಲ್ಲಿ ಸತತ ಎರಡು ಸಿಕ್ಸರ್ ಗಳನ್ನು ಬಾರಿಸಿದರು.
ಆ ಮೂಲಕ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಇನ್ನು ಈ ಪಂದ್ಯದಲ್ಲಿ ರಸೆಲ್ ಕೇವಲ 24 ಎಸೆತಗಳನ್ನು ಎದುರಿಸಿ 72 ರನ್ ಗಳಿಸಿದರು.
ಈ ಆರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ರಸೆಲ್ ವಿಶ್ವ ಕ್ರಿಕೆಟ್ ನ ಸಿಕ್ಸರ್ ಕಿಂಗ್ ಗಳ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಕೀರನ್ ಪೋಲಾರ್ಡ್ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ್ದರು.








