ಬಳ್ಳಾರಿ : ರಾಜ್ಯದ ಅತಿದೊಡ್ಡ ಉಕ್ಕಿನ ಕಾರ್ಖಾನೆಯ ನೌಕರನಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಂದಾಲ್ (JSW) ಕಾರ್ಖಾನೆಯ 35 ವರ್ಷದ ನೌಕರನಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ ತೋರಣಗಲ್ಲು ಬಳಿ ಇರೋ ಜಿಂದಾಲ್ ಕಾರ್ಖಾನೆಯ ಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಆತಂಕ ಹೆಚ್ಚು ಮಾಡಿದೆ.
ಈ ನೌಕರ ತಮಿಳುನಾಡಿನ ಸೇಲಂನಲ್ಲಿರೋ ತನ್ನ ತಾಯಿಯನ್ನು ಭೇಟಿಯಾಗಿ ಬಂದಿದ್ದನು.ತಾಯಿಗೆ ಕೊರೊನಾ ಪಾಸಿಟಿವ್ ಇತ್ತು. ತಮಿಳುನಾಡಿನಿಂದ ವಾಪಾಸ್ ಬಂದ ನಂತರ ಕಳೆದ ಮೂರು ದಿನಗಳ ಹಿಂದೆ ಕ್ವಾರೆಂಟೆನ್ ಮಾಡಲಾಗಿತ್ತು.ಜೊತೆಗೆ ಗಂಟಲು ದ್ರವ ಸಂಗ್ರಹ ಮಾಡಿ ಟೆಸ್ಟ್ ಗೆ ಕಳಿಸಲಾಗಿತ್ತು. ವರದಿ ಬಂದ ಬಳಿಕ ಇತನಿಗೆ ಸೋಂಕು ಧೃಢವಾಗಿದೆ.ಸದ್ಯ ಈತ ವಾಸವಾಗಿದ್ದ ಜಿಂದಾಲ್ ನ ವಿದ್ಯಾನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಸೋಂಕಿತನ ಜೊತೆ ಪ್ರಾಥಮಿಕ ಹಂತದಲ್ಲಿ ಇದ್ದ 10 ಜನರನ್ನು ಕ್ವಾರೆಂಟೆನ್ ಮಾಡಲಾಗಿದೆ. ತೋರಣಗಲ್ಲು ಓಪಿಜೆ ಸೆಂಟರ್ ನಲ್ಲಿ ಕ್ವಾರೆಂಟೆನ್ ಮಾಡಲಾಗಿದ್ದು, ಇವರೆಲ್ಲರನ್ನು ಇಂದು ಪರೀಕ್ಷೆ ಮಾಡಲಾಗುತ್ತದೆ ಬಳ್ಳಾರಿ ಡಿಸಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ.








