Heavy Rain | ತುಮಕೂರಿನಲ್ಲಿ ವರುಣನ ಆರ್ಭಟ : ಜನರ ರಕ್ಷಣೆ
ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ.
ನಿನ್ನೆ ರಾತ್ರಿ ಕೂಡ ಜಿಲ್ಲೆಯಲ್ಲಿ ಧೋ ಎಂದು ಮಳೆ ಸುರಿದಿದ್ದು, ಮಧುಗಿರಿ ತಾಲೂಕಿನ ಚಂದ್ರಗಿರಿಯಲ್ಲಿ ಹತ್ತಾರು ಎಕರೆ ಪ್ರದೇಶದ ತೋಟಗಳು ಜಲಾವೃತಗೊಂಡಿವೆ.

ಇತ್ತ ಚಂದ್ರಗಿರಿಯ ತೋಟದ ಮನೆಯಲ್ಲಿವಾಸವಿದ್ದ ಕುಟುಂಬ ಮಳೆಯಲ್ಲಿಸಿಲುಕಿಕೊಂಡಿದ್ದು, ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ತೋಟದ ಬಳಿ ಮನೆ ಇದ್ದ ಕಾರಣ ಮಳೆ ನೀರು ಮನೆಗೆ ನುಗ್ಗಿದೆ.
ಇದರಿಂದ ಕುಟುಂಬಸ್ಥರು ಗ್ರಾಮದ ಜನರಿಗೆ ಮೊಬೈಲ್ ಮೂಲಕ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಮಂಜುನಾಥ್ ಎಂಬುವವರು ಹಗ್ಗದ ಸಹಾಯದಿಂದ ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ.








