Harish Raj | ಜೊತೆ ಜೊತೆಯಲಿ: ಹೊಸ ಎಂಟ್ರಿ
ಸೀರಿಯಲ್ ಗೆ ನಟ ಹರೀಶ್ ರಾಜ್ ಎಂಟ್ರಿ
ಪ್ರೋಮೋ ರಿಲೀಸ್ ಮಾಡಿದ ವಾಹಿನಿ
ಹೊಸ ಬಗೆಯ ಪಾತ್ರದಲ್ಲಿ ಹರೀಶ್ ರಾಜ್
ಹರೀಶ್ ಪಾತ್ರದ ಮೂಲಕ ಹೊಸ ಕಥೆ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೊಸ ಎಂಟ್ರಿಯಾಗಿದೆ.
ನಟ ಹರೀಶ್ ರಾಜ್ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರದ ಮೂಲಕ ಹೊಸ ಕಥೆ ಶುರುವಾಗಲಿದೆಯಂತೆ.
ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದ ಬದಲು ಬೇರೆ ಪಾತ್ರ ನಿರ್ವಹಿಸಲಿದ್ದಾರೆ.
ಹರೀಶ್ ರಾಜ್ ಸೀರಿಯಲ್ ತಂಡದ ಜೊತೆ ಸೇರಿಕೊಂಡಿರುವ ಪ್ರೋಮೋವನ್ನು ವಾಹಿನಿ ರಿಲೀಸ್ ಮಾಡಿದೆ.
ಹರೀಶ್ ರಾಜ್ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆರ್ಯವರ್ಧನ್ ಪಾತ್ರವೂ ಧಾರವಾಹಿಯಲ್ಲಿ ಇರಲಿದೆ.
ಆದ್ರೆ ಆರ್ಯವರ್ಧನ್ ಪಾತ್ರವಿಲ್ಲದೇ ಹರೀಶ್ ರಾಜ್ ಪಾತ್ರದ ಮೂಲಕ ಹೊಸ ಕಥೆ ಹೇಳುವ ತಂತ್ರವನ್ನು ಸೀರಿಯಲ್ ಟೀಂ ಅನುಸರಿಸಲಿದೆ.
ಆದ್ರೆ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ತೆಗೆದುಕೊಳ್ಳದೇ ಹೇಗೆ ಧಾರಾವಾಹಿಯನ್ನು ಮುಂದುವರೆಸುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಇತ್ತ ಅನಿರುದ್ಧ್ ಅಭಿಮಾನಿಗಳು, ಮತ್ತೆ ಈ ಸೀರಿಯಲ್ ನಲ್ಲಿ ನಟಿಸಲು ಎಂದು ಆಗ್ರಹಿಸಿದ್ದಾರೆ.