Mandya | ಬಾಡಿಗೆ ಮನೆಯಲ್ಲಿ ಸಿಕ್ತು ಸುರಂಗ
ಸುರಂಗ ನೋಡಿ ದಂಗಾದ ಮಾಲೀಕರು
ಮಾದಕ ವಸ್ತು, ಮಾರಾಕಾಸ್ತ್ರಗಳು ಪತ್ತೆ
ಮಂಡ್ಯದ ಮಳವಳ್ಳಿ ಪಟ್ಟಣದಲ್ಲಿ ಘಟನೆ
ಪ್ರವಿತ್ರ ರಾಜ್ ಗೆ ಸೇರಿದ ಮನೆಯಲ್ಲಿ ಸುರಂಗ
ಮಂಡ್ಯ : ಮಳವಳ್ಳಿ ಪಟ್ಟಣದ ಮನೆಯ ಮಾಲೀಕನಿಗೆ ಬಾಡಿಗೆದಾರರು ಶಾಕ್ ನೀಡಿದ್ದಾರೆ.
ಒಂದು ವರ್ಷದ ಹಿಂದೆ ಬಾಡಿಗೆ ಪಡೆದಿದ್ದ ಕುಟುಂಬವೊಂದು ಮನೆಯಲ್ಲಿ ಸುರಂಗ ಕೊರೆದಿರುವುದು ಬೆಳಕಿಗೆ ಬಂದಿದ್ದು, ಮಾದಕ ವಸ್ತುಗಳು, ಮಾರಾಕಾಸ್ತ್ರಗಳು ಪತ್ತೆಯಾಗಿವೆ.
ಒಂದು ವರ್ಷದ ಹಿಂದೆ ಮಳವಳ್ಳಿ ಪಟ್ಟಣದ ಪವಿತ್ರರಾಜ್ ಎಂಬುವವರು ತಮ್ಮ ಮನೆಯನ್ನು ತಸ್ಲೀಮ್ ಹಾಗೂ ಆಕೆಯ ಐದು ಗಂಡು ಮಕ್ಕಳಿಗೆ ಬಾಡಿಗೆ ನೀಡಿದ್ದರು.
ಕಳೆದ ಎರಡು ತಿಂಗಳಿಂದ ಪವಿತ್ರರಾಜ್ ಅವರು ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಆದರೆ ತಸ್ಲೀಮ್ ಕುಟುಂಬ ಮನೆ ಖಾಲಿ ಮಾಡದೇ ಸಬೂಬುಗಳನ್ನು ಹೇಳುತ್ತಿತ್ತಂತೆ.

ಆದ್ರೆ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಬಿದ್ದ ಕಾರಣ, ಮನೆಯ ಗೋಡೆ ಕುಸಿದಿದೆ.
ಹೀಗಾಗಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿ 12 ಅಡಿಯ ಸುರಂಗ ಕೊರೆದಿರುವುದು ಪತ್ತೆಯಾಗಿದೆ.
ಕೂಡಲೇ ಪವಿತ್ರರಾಜ್ ಮಳವಳ್ಳಿ ಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತ ಮಾದಕ ವಸ್ತು, ಮಾರಾಕಾಸ್ತ್ರಗಳೊಂದಿಗೆ ಮನೆಯಲ್ಲಿದ್ದ ನಾಲ್ವರು ಪುರುಷರು ತಮ್ಮ ತಾಯಿ ತಸ್ಲೀಮ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.








