Saakshatv Author Special
ಅವಳು ಅವಳೆಂದರೆ ಪ್ರಕೃತಿ ಅವಳ ಮನಸ್ಸು ಪ್ರಕೃತಿ ಅಷ್ಟೆ ವಿಶಾಲ ,ಅವಳು ನಾವು ಉಸಿರಾಡುವ ಗಾಳಿಯಂತೆ ಕಾಣಳು ಆದರೆ ಸದಾ ಜೊತೆ ಇರುವಳು. ಅವಳು ಎಲೆ ಮರೆ ಕಾಯಿಯಂತೆ ಎಲ್ಲವನ್ನು ತಿಳಿದವಳು.
ಸುಂದರ ಮೊಗದವಳು.. ಸುಂದರ ( Beautiful) ಮೂಗಿನವಳು..ಚುರುಕು ಕಿವಿ ಕೊಟ್ಟು ಉಳ್ಳವಳು..ರೇಷಿಮೆಯ ಕೇಶ ಹೊಂದಿದವಳು.
ನೋಡಿದರೆ ಹಾವಿನ ಬಾಲದಂತೆ ಗೋಚರಿಸುವ ಅವಳ ಉದ್ದನೆಯ ಕೂದಲು ಅವಳ ಕಣ್ಣ ರೆಪ್ಪೆ..ಕಾಡಿಗೆ….ಆ ಬಿಂದಿ…ಆ ನಗು….ಆ ಮುದ್ದು ಮುಖ..ನನ್ನ ಮನಸ್ಸ ಕೆಡಿಸಿ ಬಿಟ್ಟಿತು….
ಅವಳ ಕಂಡ ದಿನ ಸ್ವರ್ಗ ಭೂಮಿಗೆ ಬಂದಿಳಿದಂತಾಗಿತ್ತು.
ಅವಳು ಅರಿತೋ ಅರಿದೆಯೋ ನನ್ನ ಸೋಕಿದಾಗ…..ನಿಲ್ಲದೆ ಜೋರಾಗಿ ಬಡಿದ ಈ ಹೃದಯ…ಅವಳಿಗೆ ತನ್ನನ್ನೆ ಅರ್ಪಿಸಿ ಕೊಂಡು ಬಿಟ್ಟಿತು…ಅದು ನನ್ನ ಅನುಮತಿಯೂ ಕೇಳದೆ ಅವಳ ಜೋತೆಗೆ ಹೊರಟು ಹೋಯಿತು…
ದಿನ ಕಾಲೇಜ್ ಗೆ ಬರುವುದೆ ಅವಳ ನೋಡಲೆಂದೆ ಎಂಬ ಕಾಯಕವಾಗಿ ಬಿಟ್ಟಿತು…ಅವಳು ಕಾಣದಿದ್ದರೆ..ಮನಸ್ಸಲ್ಲಿ ಏನೋ ತಳಮಳ…ಅಸಮಧಾನ…ಹೀಗೆ ಎರಡು ವರ್ಷ ಕಳೆದೆ ಹೋಯಿತು…
ಅಂತಿಮ ವರ್ಷದ ಆರಂಭ…ಅವಳ ನನ್ನ ಸ್ನೇಹದಾರಂಭ… ಹರುಷದಿ ಕುಣಿದು ಕುಪ್ಪಳಿಸಿದ ಈ ಪುಟ್ಟ ಹೃದಯ ಇಂದಿಗೂ ಆ ದಿನ ಮರೆತಿಲ್ಲ…
ಅವಳು ನನ್ನ ಸ್ನೇಹಿತೆಯಾದ ಮೇಲೆ ನನ್ನನ್ನೆ ಹುಡುಕಿ ಬಂದು ನನ್ನ ಪಕ್ಕದಲ್ಲಿಯೆ ಕುಳಿತು ಬಿಡುವಳು ಅವಳು ಬಂದು ಕುಳಿತರೆ ನನಗೆ ಹೇಳದೆ ಕೇಳದೆ ತನ್ನಷ್ಟಕ್ಕೆ ತಾನೆ ಹೆಚ್ಚಾಗಿ ಬಡಿದು ಕೋಳ್ಳುವ ಮುದ್ದು ಹೃದಯ…
ಯಾವಾಗ ಅವಳ ಮೇಲೆ ಪ್ರೀತಿ ( Love ) ಹುಟ್ಟಿಸಿತೋ ಗೋತ್ತಿಲ್ಲಾ..ಅವಳನ್ನ ನನ್ನ ಪ್ರೀತಿಯಲ್ಲಿ ಬಿಳಿಸಿತೋ ಗೊತ್ತಿಲ್ಲಾ…ಆದರೆ ಅವಳು ಪ್ರೇಮ ನಿವೇದನೆ ಮಾಡಿದಾಗ..ಈ ಜೀವ ಹೋಗಿ ಬಂದಿತ್ತು…ಏನೂ ಹೇಳಲು ಮಾತೆ ಇರಲಿಲ್ಲ…ಪ್ರಪಂಚ ಮರೆತು ಮೂಕನಾಗಿ ನಿಂತು ಬಿಟ್ಟಿದ್ದೆ…
ಎದುರಿನಲ್ಲಿ ಹೋದ ನನ್ನ ಚಿಕ್ಕಪ್ಪ ನನ್ನನ್ನೂ ಸಹ ಗುರುತಿಸದೆ, ಏನೂ ಅರಿಯದವನಂತೆ ಪ್ರಪಂಚ ಮರೆತು ನಿಂತು ಬಿಟ್ಟಿದ್ದೆ…
ಆ ದಿನ ಆ ಕ್ಷಣ ನನ್ನ ಜೀವನದ ಅಚ್ಚರಿಯ ದಿನ.. ಅದ್ಬುತ ದಿನ…ಈ ಅವಳ ಧ್ವನಿ ನನ್ನ ಕಿವಿ ಬಯಸುವ ಸುಲಲಿತ ಸುಂದರ ಸಂಗೀತ….ಅವಳ ಭಾವ ಚಿತ್ರ ನನ್ನ…ಕಣ್ಣಗೆ..ಸದಾ ಅಂಟಿದ ರೆಪ್ಪೆಯಂತೆ.
ಅವಳ ಕಾಣಲು ತಿಂಗಳಾನುಗಟ್ಟೆಲೆ ತಪಸ್ಸಿನಂತೆ ಕಾಯುವೆ…ಅವಳು ಬಂದಾಗ ಮೂಕನಾಗುವೆ…
ಅವಳು ಎಲ್ಲೆ ಇದ್ದರು…ಹೇಗೆ ಇದ್ದರು ನಾನು ಅವಳಿಗಾಗಿಯೆ ಇರುವೆ..
ಸದಾ ಅವಳವನಾಗೆಯೇ ಇರುವೆ…
( ಮುಂದಿನ ಭಾಗಗಳು ದಿನ ದಿನ ಅಪ್ ಡೇಟ್ ಆಗುವುದು.. ಸಂಜೆ 5.30ಕ್ಕೆ )
ಇದನ್ನೂ ಓದಿ : https://saakshatv.com/saakshatv-author-special-life-memories-experiences-saakshatv/
– Ranjeeta.m.y