ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾಕಷ್ಟು ವಿವಾದಗಳು , ವಿರೋಧಗಳ ನಂತರವೂ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ… ಇದೀಗ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಹಿಂದೂ ಪರ ಸಂಘಟನೆಗಳು ಗಣೇಶ ಪ್ರತಿಷ್ಟಾಪನೆ ಮಾಡಿ ಹಬ್ಬವನ್ನು ಆಚರಿಸಿದರು.
ಈಗಾಗಲೇ ಪೆಂಡಾಲ್ ಹಾಕಿ ಗಣೇಶನನ್ನು ಕೂರಿಸಿದ್ದು ಅದರಂತೆ ಗಣೇಶನ ಮೂರ್ತಿಯನ್ನು ತಂದು ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನೊಂದೆಡೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದವನ್ನು ಇತ್ಯರ್ಥಪಡಿಸಿದ ಕೋರ್ಟ್, ರಾಣಿ ಚೆನ್ನಮ್ಮ ಗಣೇಶೋತ್ಸವ ಮಹಾಮಂಡಳಿ ಸಮಿತಿಗೆ ಗಣೇಶೋತ್ಸವದ ಜವಾಬ್ದಾರಿಯನ್ನು ನೀಡಿದೆ.
ಈ ನಿಟ್ಟಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾನ ಮಾಡಲಿರುವ ಮಹಾಮಂಡಳಿ ಸಮಿತಿಯು ಎಲ್ಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಅಲ್ಲದೆ ಗಣೇಶನ ಪ್ರತಿಷ್ಠಾಪನೆ ವೇಳೆ ಕೇಂದ್ರ ಸಚಿವ ಪ್ತಹ್ಲಾದ್ ಜೋಶಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದು ಅಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಭಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಆರ್ ಎಸ್ ಎಸ್ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಈದ್ಗಾ ಮೈದಾನ ಶುದ್ಧಿಕರಣದ ನಂತರ ಗಣೇಶನ ಪ್ರತಿಷ್ಠಾಪಿಸಲಾಯ್ತು..
ಹೈಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಹರ್ಷಗೊಂಡು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಅಲ್ಲದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳವನ್ನು ಗೋ ಮೂತ್ರದಿಂದ ಶುದ್ಧೀರಕಿಸಿದ್ದರು.. ಇದೀಗ ಹಬ್ಬ ಆಚರಣೆ ಆರಂಭವಾಗಿದೆ..