Ramya : ನಿರ್ಮಾಪಕಿಯಾಗಿ ಬಡ್ತಿ ಪಡೆದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ..
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಿನಿಮಾರಂಗದಿಂದ ದೂರಾಗಿ ಸುಮಾರು ವರ್ಷಗಳೇ ಕಳೆದ್ರೂ ಈಗಲೂ ಅವರ ಕ್ರೇಜ್ ಕಡಿಮೆಯಾಗಿಲ್ಲ.. ಅವರ ಕಮ್ ಬ್ಯಾಕ್ ಗಾಘಿ ಅಭಿಮಾನಿಗಳು ಕಾಯ್ತಿದ್ದಾರೆ.. ರಮ್ಯಾ ಸಹ ಮತ್ತೆ ಸ್ಯಾಂಡಲ್ ವುಡ್ ಗೆ ಶೀಘ್ರವೇ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿತ್ತು.. ಅದಕ್ಕೆ ಸರಿಯಾಗಿ ರಮ್ಯಾ ಇತ್ತೀಚೆಗೆ ಆಗಸ್ಟ್ 31 ರಂದು 11 : 15 ಕ್ಕೆ ಗುಡ್ ನ್ಯೂಸ್ ಕೊಡ್ತೀನಿ ಎಂದಿದ್ದರು.. ಕೊಟ್ಟಿದ್ದಾರೆ ಕೂಡ..
ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡ್ತಿರೋದನ್ನ ರಮ್ಯಾ ಕನ್ ಫರ್ಮ್ ಮಾಡಿದ್ದಾರೆ.. ಈ ಬಾರಿ ಆಪಲ್ ಬಾಕ್ಸ್ ನೀಡಿದ್ದಾರೆ,..
ಏನಿದು ಆಪಲ್ ಬಾಕ್ಸ್…??
ಇದು ಮೋಹಕ ತಾರೆ ರಮ್ಯಾರ ನಿರ್ಮಾಣ ಸಂಸ್ಥೆ.. ರಮ್ಯಾ ನಿರ್ಮಾಪಕಿಯಾಗಿ ಇದೀಗ ಕಮ್ ಬ್ಯಾಕ್ ಮಾಡ್ತಿದ್ದು ಎರೆಡು ಸಿನಿಮಾಗಳನ್ನೂ ಕೂಡ ನಿರ್ಮಾಣ ಮಾಡ್ತಿದ್ದಾರೆ..
ರಮ್ಯಾ, ಸಂಸ್ಥೆಯ ಕುರಿತಾದ ಮಾಹಿತಿಯನ್ನು ಕೆಆರ್.ಜಿ ಸೇರಿದಂತೆ ಹಲವರಿಂದ ಪಡೆದಿದ್ದಾರೆ. ಕೆ.ಆರ್.ಜಿ ಸ್ಟುಡಿಯೋ ಸಹಕಾರದಲ್ಲೇ ತಮ್ಮ ಸಂಸ್ಥೆಯನ್ನು ಕಟ್ಟುವ ಕನಸು ಕಂಡಿದ್ದಾರೆ. ಹೀಗಾಗಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಮಾಡುತ್ತಿರುವುದಾಗಿಯೂ ಅವರು ಘೋಷಣೆ ಮಾಡಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನ ನಿರ್ಮಾಣ ಮಾಡಲು ಹೊರಟಿದ್ದಾರೆ..








