Punjab – ಆಪ್ ಪಕ್ಷದ ಮಹಿಳಾ ಶಾಸಕಿ ಮೇಲೆ ಹಲ್ಲೆ ಮಾಡಿದ ಪತಿ
ಪಂಜಾಬ್ನ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರ ಮೇಲೆ ಪತಿ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಲ್ವಾಂಡಿ ಸಾಬೊದಲ್ಲಿ ಶಾಸಕಿಯ ಮನೆಯ ಹೊರಗಿನ ಸಿಸಿಟಿಯ ಕ್ಯಾಮೆರಾದಲ್ಲಿ ವಿಡಿಯಾ ಸೆರೆಹಿಡಿಯಲಾಗಿದೆ.
ಜುಲೈ 10 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೋವನ್ನು ಯಾರು ಲೀಕ್ ಮಾಡಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ.
https://twitter.com/i/status/1565346345082572804
ತಲ್ವಾಂಡಿ ಸಾಬೊದಿಂದ ಎರಡು ಬಾರಿ ಎಎಪಿ ಶಾಸಕಿಯಾಗಿದ್ದ ಬಲ್ಜಿಂದರ್ ಕೌರ್ ಅವರು ತಮ್ಮ ಪತಿ ಸುಖರಾಜ್ ಸಿಂಗ್ ಅವರ ಜೊತೆ ಜಗಳ ಆಡುತ್ತಿರುವುದನ್ನ ನೋಡಬಹುದು. ಶಾಸಕಿ ಪತಿ ಸುಖರಾಜ್ ಕೋಪದ ಭರದಲ್ಲಿ ಕೈ ಮಾಡುತ್ತಿರುವುದನ್ನ ನೋಡಬಹುದು. ದಂಪತಿಗಳ ಪಕ್ಕದಲ್ಲಿ ಕೆಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ.
ಬಲ್ಜಿಂದರ್ ಕೌರ್ ಅಥವಾ ಅವರ ಪತಿ ಈ ವಿಡಿಯೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ ಅವರು ಈ ವೀಡಿಯೊವನ್ನ ನೋಡಿ ಸ್ವಯಂ ಪ್ರೇರಿತವಾಗಿ ನೋಟಿಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.








