Bangalore | ರಾಜಕಾಲುವೆಗಳ ದುರಸ್ತಿಗೆ 1500 ಕೋಟಿ
ಬೆಂಗಳೂರು : ರಾಜಕಾಲುವೆಗಳ ದುರಸ್ತಿಗೆ 1500 ಕೋಟಿ ನೀಡಿದ್ದೇವೆ, ಮಳೆ ನಿಂತ ನಂತರ ಕೆಲಸ ಆರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದೊಂದು ವಾರದಿಂದ ಮಳೆ ಬರ್ತಿದೆ, ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತೀ ಹೆಚ್ಚು ಹಾನಿ ಸಮಸ್ಯೆ ಆಗಿದೆ.
ಈ ಭಾಗಗಳಲ್ಲಿ ಹೆಚ್ಚು ಕೆರೆಗಳಿರೋದಿಕ್ಕೆ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ, ರಾಜಕಾಲುವೆಗಳಿಗೆ ನೀರು ಹರಿದಿದೆ. ಕೆರೆ ನೀರು,ಮಳೆ ನೀರು ಸೇರಿ ರಾಜ ಕಾಲುವೆ ಸಾಮರ್ಥ್ಯ ಮೀರಿ ಹರಿದು ಸಮಸ್ಯೆ ಆಗಿದೆ ಎಂದು ತಿಳಿಸಿದರು.

ಇನ್ನು ರಾಜಕಾಲುವೆಗಳ ದುರಸ್ತಿಗೆ 1500 ಕೋಟಿ ನೀಡಿದ್ದೇವೆ, ಮಳೆ ನಿಂತ ನಂತರ ಕೆಲಸ ಆರಂಭ ಮಾಡ್ತೀವಿ. ಕಳೆದ ಸಿಟಿ ರೌಂಡ್ಸ್ ಪ್ರದೇಶಗಳಲ್ಲಿ ಹೇಳಿದ ಕೆಲಸ ಪ್ರಾರಂಭ ಮಾಡುತ್ತೇವೆ. ಯಾರೇ ಪ್ರಭಾವಿ ಇದ್ದರೂ ಒತ್ತುವರಿ ತೆರವು ಮಾಡುತ್ತೇವೆ ಎಂದರು.
ರಾಜಕಾಲುವೆಗಳ ಒತ್ತುವರಿಯಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಒತ್ತುವರಿ ತೆರವು ಬಳಿಕ ರಾಜಕಾಲುವೆಗಳ ನಿರ್ಮಾಣ ಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ಕಡೆ ಎಸ್ಟಿಮೇಟ್ ಮಾಡಿ ರಾಜಕಾಲುವೆಗಳ ನಿರ್ಮಾಣ ಮಾಡ್ತೇವೆ ಎಂದು ಹೇಳಿದರು.








