INS ವಿಕ್ರಾಂತ್ ವಿಮಾನವಾಹಕ ನೌಕೆ
INS ವಿಕ್ರಾಂತ್ ವಿಮಾನವಾಹಕ ಲೋಕಾರ್ಪಣೆ
INS ವಿಕ್ರಾಂತ್ ಲೋಕಾರ್ಪಣೆ ಮಾಡಿದ ಪಿಎಂ
ಭಾರತೀಯ ನೌಕಾಪಡೆಗೆ INS ವಿಕ್ರಾಂತ್ ಸೇರ್ಪಡೆ
ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ
ನವದೆಹಲಿ : ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಇದರೊಂದಿಗೆ ಐಎನ್ ಎಸ್ ವಿಕ್ರಾಂತ್ ವಿದ್ಯುಕ್ತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.
45 ಸಾವಿರ ತೂಕದ ವಿಕ್ರಾಂತ್ ಅನ್ನು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 262 ಮೀಟರ್ ಉದ್ದ ಹಾಗೂ 62 ಮೀಟರ್ ಅಗಲವಿದೆ.

ಇದು ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ.
ವಿಕ್ರಾಂತ್ ಮಿಗ್ 29ಕೆ ಫೈಟರ್ ಜೆಟ್ ಗಳು ಹಾಗೂ ಹೆಲಿಕಾಪ್ಟರ್ ಗಳನ್ನು ಒಳಗೊಂಡಂತೆ 30 ವಿಮಾನಗಳನ್ನು ಹೊಂದಬಹುದ. ಯುದ್ಧ ನೌಕೆಯು ಸುಮಾರು 1600 ಸಿಬ್ಬಂದಿಗೆ ಅವಕಾಶ ಕಲ್ಪಿಸುತ್ತದೆ.
ಇಂದು ಐಎನ್ ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅನುಪಮವಾದ ಅಮೃತ ವಿಕ್ರಾಂತ, ಭಾರತ ಸ್ವಾವಲಂಬಿಯಾಗುವುದರ ವಿಶಿಷ್ಠ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.








