ಅರ್ಜೆಂಟೀನಾದ ಉಪಾಧ್ಯಕ್ಷೆ ಮೇಲೆ ಗುಂಡಿನ ದಾಳಿ ಯತ್ನ…
ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆದ ಘಟನೆ ಮಾಸುವ ಮುನ್ನವೆ, ಇದೀಗ ಅರ್ಜೆಂಟೀನಾದ ಉಪಾಧ್ಯಕ್ಷರ ಮೇಲೂ ದಾಳಿ ನಡೆದಿದೆ. ಅದೃಷ್ಟವಶಾತ್ ಬಂದೂಕಿನಿಂದ ಗುಂಡು ಸಿಡಿಯದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಮೇಲೆ ಗುರುವಾರ ತಡರಾತ್ರಿ ಬ್ರೆಜಿಲಿಯನ್ 35 ವರ್ಷದ ಫರ್ನಾಂಡೊ ಸಬಕ್ ಮೊಂಟಿಯೆಲ್ ಎಂಬ ವ್ಯಕ್ತಿ ಗುಂಡು ಹಾರಿಸಿಲು ಯತ್ನಿಸಿದ್ದಾನೆ. ಅಫರಾಧಿಯನ್ನ ಬ್ಯೂನಸ್ ಐರಿಸ್ನ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅರ್ಜೆಂಟೀನಾದ ಭದ್ರತಾ ಸಚಿವ ಅನಿಬಾಲ್ ಫರ್ನಾಂಡೀಸ್ ಹೇಳಿದ್ದಾರೆ.
https://twitter.com/i/status/1565513406181941248
ಉಪಾಧ್ಯಕ್ಷರ ತಲೆಗೆ ಪಿಸ್ತೂಲ್ ಇಟ್ಟಿರುವ ವ್ಯಕ್ತಿ ಟ್ರಿಗರ್ ಎಳೆದಿದ್ದಾನೆ. ಆದರೆ, ಗುಂಡು ಹಾರಿಲ್ಲ ಎಂದು ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ತಿಳಿಸಿದರು. ದೇಶ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಡೆದ ಅತ್ಯಂತ ಗಂಭೀರ ಘಟನೆ ಇದಾಗಿದೆ ಎಂದಿದ್ದಾರೆ.
Argentina Vice President Assasination Bid Foiled, 35-Year-Old Brazilian Held; National Holiday Declared








