ಗೌತಮ ಬುದ್ಧನ ಈ ಆಲೋಚನೆಗಳು ನಿಮಗೆ ಜ್ಞಾನದ ಬೆಳಕು ನೀಡುತ್ತವೆ..
ಗೌತಮ ಬುದ್ಧನ ಅಮೂಲ್ಯವಾದ ಆಲೋಚನೆಗಳು ಜೀವನದಲ್ಲಿ ಯಶಸ್ವಿಯಾಗಲು ಮತ್ತು ಮುನ್ನಡೆಯಲು ಪ್ರೇರೇಪಿಸುತ್ತವೆ. ನಿಮ್ಮ ಜೀವನದಲ್ಲಿ ಜ್ಞಾನದ ಬೆಳಕು ಬೇಕು ಮತ್ತು ಜೀವನವನ್ನ ಉತ್ತಮ ರೀತಿಯಲ್ಲಿ ಬದುಕಬೇಕೆಂದು ನೀವು ಬಯಸಿದರೆ, ಬುದ್ಧನ ಈ ಅಮೂಲ್ಯವಾದ ನುಡಿಗಳು ನಿಮಗೆ ಸಹಾಯ ಮಾಡುತ್ತವೆ..
- ಜೀವನದಲ್ಲಿ ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ಜಯಿಸುವುದು ಉತ್ತಮ ನಿಮ್ಮನ್ನು ನೀವು ಜಯಿಸಿದರೆ ಗೆಲುವು ಯಾವಾಗಲೂ ನಿಮ್ಮದೇ ಆಗಿರುತ್ತದೆ. ಅದನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ – ಮಹಾತ್ಮ ಗೌತಮ ಬುದ್ಧ
- ದುಷ್ಟತನದಿಂದ ಕೆಟ್ಟದ್ದನ್ನು ಎಂದಿಗೂ ತೊಡೆದುಹಾಕಲು ಸಾಧ್ಯವಿಲ್ಲ. ಅದನ್ನು ಕೊನೆಗೊಳಿಸಲು ಪ್ರೀತಿಯ ಸಹಾಯವನ್ನು ತೆಗೆದುಕೊಳ್ಳಬೇಕು. ಪ್ರೀತಿಯಿಂದ ಜಗತ್ತಿನ ಎಲ್ಲ ಮಹತ್ಕಾರ್ಯಗಳನ್ನು ಜಯಿಸಬಹುದು – ಗೌತಮ ಬುದ್ಧ
- ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ತಲೆ ಕೆಡಿಸಿಕೊಳ್ಳಬೇಡಿ. ಹಿಂದಿನದನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುವುದಕ್ಕಿಂತ ನಿಮ್ಮ ವರ್ತಮಾನದಲ್ಲಿ ಇರುವುದು ಉತ್ತಮ. ಸಂತೋಷವಾಗಿರಲು ಇದು ಅತ್ಯುತ್ತಮ ಮಾರ್ಗವಾಗಿದೆ – ಗೌತಮ ಬುದ್ಧ
- ಉರಿಯುವ ದೀಪ ಸಹಸ್ರಾರು ಜನರಿಗೆ ಬೆಳಕು ನೀಡುತ್ತದೆ. ಅದೇ ರೀತಿ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಪ್ರೀತಿ ಹೆಚ್ಚಾಗುತ್ತದೆ. ಸಂತೋಷವ ಯಾವಾಗಲೂ ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆ. ಎಂದಿಗೂ ಕಡಿಮೆಯಾಗುವುದಿಲ್ಲ – ಗೌತಮ ಬುದ್ಧ
- ಕಾಡು ಪ್ರಾಣಿಗಿಂತ ಕಪಟ ಮತ್ತು ದುಷ್ಟ ಸ್ನೇಹಿತನಿಗೆ ಭಯಪಡಬೇಕು. ಕಾಡು ಪ್ರಾಣಿ ನಿಮ್ಮ ದೇಹಕ್ಕೆ ಹಾನಿ ಮಾಡಬಹುದು, ಆದರೆ ಕೆಟ್ಟ ಸ್ನೇಹಿತ ನಿಮ್ಮ ಬುದ್ಧಿವಂತಿಕೆಗೆ ಹಾನಿ ಮಾಡಬಹುದು – ಗೌತಮ ಬುದ್ಧ








