Today Gold Silver Price: ಸತತ ಮೂರನೇ ದಿನ ಇಳಿಕೆ ಕಂಡ ಚಿನ್ನದ ದರ…
ಬಂಗಾರ ಪ್ರಿಯರಿಗೆ ಸಂತಸದ ಸುದ್ದಿ..ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನ ಖರೀದಿಸಲು ಬಯಸುವವರಿಗೆ ಇದು ಬಂಪರ್. ಚಿನ್ನದ ಬೆಲೆ ಯಾವಾಗ ಮತ್ತು ಹೇಗಿರುತ್ತದೆ. ಎಂದು ಹೇಳುವುದು ಸಾಧ್ಯವಿಲ್ಲ. ಒಂದು ದಿನ ಕಡಿಮೆಯಾದರೆ ಮರುದಿನ ಹೆಚ್ಚಾಗುವುದು ಖಚಿತ.
ಆಗಸ್ಟ್ 27 ರಿಂದ ಚಿನ್ನದ ದರ ಕುಸಿಯಲಾರಂಭಿಸಿದೆ. 30 ರಂದು ಕೊಂಚ ಏರಿಕೆಯಾಗಿತ್ತಾದರೂ ಮೂರು ದಿನಗಳಿಂದ ಹಂತ ಹಂತವಾಗಿ ಇಳಿಕೆಯಾಗುತ್ತಿದೆ.
ಇನ್ನು ಬೆಳ್ಳಿ ಬೆಲೆಯ ವಿಷಯಕ್ಕೆ ಬಂದರೆ, ಎರಡು ದಿನಗಳಿಂದ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಶನಿವಾರವೂ ಸ್ಥಿರವಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಂತಿದೆ…
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ. 46,550 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 50,780 ಇದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 46,450 ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ರೂ. 50,670.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ರೂ.46,400 ಆಗಿದ್ದರೆ, 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ರೂ.50,620 ಆಗಿದೆ.
ಮುಂಬೈನಲ್ಲಿ 22ಕ್ಯಾರೆಟ್ ಚಿನ್ನ 46,400 ರೂ. 24 ಕ್ಯಾರೆಟ್ ಹಳದಿ ಲೋಹದ ಬೆಲೆ 50,620 ರೂ.
ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 46,950 ಆಗಿದ್ದರೆ 24 ಕ್ಯಾರೆಟ್ ಚಿನ್ನದ ದರ ರೂ. 51,220 ಮುಂದುವರಿದಿದೆ.
ಬೆಳ್ಳಿ ಬೆಲೆಗಳು
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 700 ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋ ಬೆಳ್ಳಿ ಬೆಲೆ ರೂ. 52,300. ಮುಂಬೈನಲ್ಲಿ ಒಂದು ಕಿಲೋ ಬೆಳ್ಳಿ ರೂ. 52,300 ನಲ್ಲಿ ಮುಂದುವರೆಯುತ್ತಿದೆ.








