Bagalkot | ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆ ಶವಸಂಸ್ಕಾರ
ಬಾಗಲಕೋಟೆ : ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೆರಕಲಮಟ್ಟಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಮಶಾನವಿಲ್ಲದೇ ಜನರು ರೋಸಿ ಹೋಗಿದ್ದರು.

ಸ್ಮಶಾನಕ್ಕೆ ಜಾಗ ನಿಗಧಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಆದ್ರೂ ಈ ಬಗ್ಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆ ಅಂತ್ಯಸಂಸ್ಕಾರಕ್ಕೆ ಜನರು ಸಜ್ಜಾಗಿದ್ದಾರೆ.
ಗ್ರಾಮದ ಕಾಳಪ್ಪ ಕಂಬಾರ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೃತ ವ್ಯಕ್ತಿಗೆ ಸ್ವಂತ ಜಮೀನು ಇಲ್ಲ.
ಇತ್ತ ಗ್ರಾಮಕ್ಕೆ ಸ್ಮಶಾನವೂ ಇಲ್ಲ. ಹೀಗಾಗಿ ಗ್ರಾಮಪಂಚಾಯಿತಿ ಮುಂದೆ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.







