One-Word Tweet: ಟ್ವೀಟರ್ ನಲ್ಲಿ ಟ್ರೆಂಡ್ ಆಗುತ್ತಿದೆ ಒನ್ ವರ್ಡ್ ಟ್ವೀಟ್…
ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಯಾವುದು ಟ್ರೆಂಡ್ ಆಗುತ್ತದೆ ಎಂದು ಹೇಳುವುದು ಕಷ್ಟ. ಇತ್ತೀಚಿಗೆ ಟ್ವೀಟರ್ ನಲ್ಲಿ ಹೊಸದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಅದೇ ಒನ್ ವರ್ಡ್ ಟ್ವೀಟ್. ಆಕಸ್ಮಿಕವಾಗಿ ಟ್ವೀಟರ್ ನಲ್ಲಿ ಅಪ್ಲೋಡ್ ಆದ ಈ ಟ್ವೀಟ್ ಇದೀಗ ವೈರಲ್ ಆಗಿ ಟ್ರೆಂಡಿಂಗ್ ಆಗಿ ಮಾರ್ಪಟ್ಟಿದೆ.
ಅಮೆರಿಕದ ರೈಲ್ವೆ ಕಂಪನಿ ‘ಆಮ್ಟ್ರಾಕ್’ ಗುರುವಾರ ತನ್ನ ಟ್ವಿಟರ್ ಖಾತೆಯಲ್ಲಿ ‘ಟ್ರೇನ್ಸ್’ ಎಂಬ ಒಂದೇ ಪದವನ್ನು ತಪ್ಪಾಗಿ ಟ್ವೀಟ್ ಮಾಡಿದೆಯಂತೆ, ಇರಬಹುದು ಅಥವಾ ಇಲ್ಲದಿರಬಹುದು. ಆ ಟ್ವೀಟ್ ಮಾಡಿದ 24 ಗಂಟೆಗಳಲ್ಲಿ ಸುಮಾರು 25 ಸಾವಿರ ಮಂದಿ ರಿಟ್ವೀಟ್ ಮಾಡಿದ್ದು, 1.80 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
ಟ್ರೈನ್ಸ್ ಎಂಬ ಒಂದೇ ಒಂದು ಪದ ವೈರಲ್ ಆದ ನಂತರ ಎಲ್ಲರೂ ಈಗ ಅದನ್ನೇ ಫಾಲೋ ಮಾಡುತ್ತಿದ್ದಾರೆ. ನಾಸಾ ‘ಯೂನಿವರ್ಸ್’ ಎಂದು ಟ್ವೀಟ್ ಮಾಡಿದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಪ್ರಜಾಪ್ರಭುತ್ವ’ ಎಂದು ಟ್ವೀಟ್ ಮಾಡಿದ್ದಾರೆ. ಸೆನೆಟ್ ‘ಟೆಕ್’ ಎಂದು ಟ್ವೀಟ್ ಮಾಡಿದೆ.
ಇದೀಗ ಈ ಟ್ರೆಂಡ್ ಭಾರತಕ್ಕೂ ಕಾಲಿಟ್ಟಿದೆ. ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ‘ಕ್ರಿಕೆಟ್’ ಎಂದು ಟ್ವೀಟ್ ಮಾಡಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಮ್ಮ ಪತ್ನಿಯ ಹೆಸರನ್ನು ‘ದೀಪಿಕಾ’ ಎಂದು ಟ್ವೀಟ್ ಮಾಡಿದರೆ, ದೀಪಿಕಾ ಪಳ್ಳಿಕಲ್ ತಮ್ಮ ಪತಿ ದಿನೇಶ್ ಕಾರ್ತಿಕ್ ಹೆಸರನ್ನು ‘ದಿನೇಶ್’ ಎಂದು ಟ್ವೀಟ್ ಮಾಡಿದ್ದಾರೆ. ಕೆಜಿಎಫ್ ಮತ್ತು ಸಲಾರ ಚಿತ್ರದ ಅಫಿಶಿಯಲ್ ಅಕೌಂಟ್ ಗಳಲ್ಲೂ ಕ್ರಮವಾಗಿ ಮಾನ್ ಸ್ಟಾರ್, ಮತ್ತು ವೈಲೆಂಟ್ ಎಂದು ಟ್ವೀಟ್ ಮಾಡಲಾಗಿದೆ.








