ವಿಶ್ವ ದಾಖಲೆ ನಿರ್ಮಿಸಿದ ಕೊಹ್ಲಿ
ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕಿಂಗ್
ಅತ್ಯಧಿಕ ಬಾರಿ 50+ ರನ್ ಗಳಿಸಿದ ಕೊಹ್ಲಿ
ರೋಹಿತ್ ಶರ್ಮಾ ದಾಖಲೆ ವಿರಾಟ್ ಬ್ರೇಕ್
32 ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಕ್ರಿಕೆಟ್ ಮೈದಾನಲ್ಲಿ ಕಿಂಗ್ ವಿರಾಟ್ ಕೊಹ್ಲಿಯ ಜಲ್ವಾ ಶುರುವಾಗಿದೆ. ಕಿಂಗ್ ಕೊಹ್ಲಿ ಮತ್ತೆ ಬ್ಯಾಟ್ ಝಳಪಿಸಲು ಆರಂಭಿಸಿದ್ದು, ಏಷ್ಯಾಕಪ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ.
ಹಾಂಗ್ ಕಾಂಗ್ ವಿರುದ್ಧ ಅರ್ಧ ಶತಕ ಸಿಡಿಸಿದ ವಿರಾಟ್, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಹಳೆಯ ಖದರ್ ತೋರಿಸಿದರು. ತುಂಬಾ ದಿನಗಳ ಬಳಿಕ ವಿರಾಟ್ ಕೊಹ್ಲಿ ತಮ್ಮ ಟಚ್ ನಲ್ಲಿ ಕಾಣಿಸಿಕೊಂಡರು.
ಈ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಜೊತೆಗೆ ಆಕ್ರಮಣಕಾರಿಯಾಗಿ ಕಾಣಿಸಿಕೊಂಡ ವಿರಾಟ್, 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಆ ಮೂಲಕ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಬಾರಿ 50 + ರನ್ ಬಾರಿಸಿದ ಬ್ಯಾಟ್ಸ್ ಮೆನ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಈ ಹಿಂದೆ ಈ ವಿಶ್ವದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ ಮ್ಯಾನ್ ಟಿ 20 ಕ್ರಿಕೆಟ್ ನಲ್ಲಿ 31 ಅರ್ಧಶತಕಗಳನ್ನು ಗಳಿಸಿದ್ದರು.
ಪಾಕಿಸ್ತಾನ ತಂಡದ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ರೋಹಿತ್ ದಾಖಲೆ ಮುರಿದಿದ್ದಾರೆ.
ವಿರಾಟ್ ಟಿ 20 ಕ್ರಿಕೆಟ್ ನಲ್ಲಿ 32 ಅರ್ಧಶತಕಗಳನ್ನು ಬಾರಿಸಿದ್ದು, ಈ ಮೂಲಕ 32 ಬಾರಿ 50 + ರನ್ ಕಲೆಹಾಕಿದ ಬ್ಯಾಟ್ಸ್ ಮೆನ್ ಎನಿಸಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 4 ಬೌಂಡರ್ ಗಳೊಂದಿಗೆ 60 ರನ್ ಗಳಿಸಿದ್ರು.
ಇನ್ನು ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿ ಹೀಗಿದೆ.
ವಿರಾಟ್ ಕೊಹ್ಲಿ 32, ರೋಹಿತ್ ಶರ್ಮಾ 31, ಬಾಬರ್ ಅಜಂ 27 ಅರ್ಧಶತಕಗಳನ್ನು ಗಳಿಸಿದ್ದಾರೆ.