Rohit sharma | ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ತನ್ನ ಹಿಟ್ಟಿಂಗ್ ಪವರ್ ತೋರಿಸಿದ್ದಾರೆ.
ಆರಂಭದಲ್ಲಿ ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ ಕಡಿಮೆ ರನ್ ಗಳಿಗೆ ಔಟ್ ಆದ್ರೂ ಸೂರ್ಯ ಕುಮಾರ್ ಯಾದವ್ ಜೊತೆಗೆ ರೋಹಿತ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು.
32 ಎಸೆತಗಳಲ್ಲಿ ಹಾಫ್ ಸೆಂಚೂರಿ ಸಿಡಿಸಿದ ರೋಹಿತ್ ಶರ್ಮಾ, ಒಟ್ಟಾರೆ 41 ಎಸೆತಗಳಲ್ಲಿ ಐದು ಬೌಂಡರಿ, ನಾಲ್ಕು ಸಿಕ್ಸರ್ ಗಳೊಂದಿಗೆ 72 ರನ್ ಗಳಿಸಿದರು. ಇದರೊಂದಿಗೆ ಅವರು ಅಪರೂಪದ ದಾಖಲೆ ಮಾಡಿದರು.
ಏಪ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಅತ್ಯಧಿಕ ರನ್ ಗಳನ್ನು ಸಾಧಿಸಿದ ಬ್ಯಾಟರ್ ಆಗಿದ್ದಾರೆ.
ಟೀಂ ಇಂಡಿಯಾ ಪರ ಟೂರ್ನಿಯಲ್ಲಿ ರೋಹಿತ್ ಶರ್ಮಾ 1000 ರನ್ ಗಳನ್ನು ಪೂರ್ಣಗೊಳಿಸಿದ್ದಾರೆ.
ಇಲ್ಲಿಯವರೆಗೂ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಪರ ಸಚಿವ ತೆಂಡುಲ್ಕತ್ 971 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು.
ಇದೀಗ ಆ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ.
ಟೀಂ ಇಂಡಿಯಾ ಪರ 1016 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ, ಒಟ್ಟಾರೆಯಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ದಾಖಲಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮೊದಲ ಸ್ಥಾನದಲ್ಲಿ ಸನತ್ ಜಯಸೂರ್ಯ 1220 ರನ್, ಕುಮಾರ ಸಂಗಾಕರ 1075 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಏಷ್ಯಾಕಪ್ ನಲ್ಲಿ ಅತ್ಯಧಿಕ ಸಿಕ್ಸರ್ ಗಳನ್ನು ಬಾರಿಸಿದ ಬ್ಯಾಟರ್ ಆಗಿ ರೋಹಿತ್ ಶರ್ಮಾ ನಿಂತಿದ್ದು, ಶಾಹಿದ್ ಅಫ್ರಿದಿ ಅವರೊಂದಿಗೆ 40 ಸಿಕ್ಸರ್ ಗಳೊಂದಿಗೆ ಸಂಯುಕ್ತವಾಗಿ ಮೊದಲ ಸ್ಥಾನದಲ್ಲಿದ್ದಾರೆ.