ನೂಪುರ್ ಶರ್ಮಾ ಬಂಧನ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ
ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಹೇಳಿಕೆ ಪ್ರಕರಣದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠವು, ಅರ್ಜಿದಾರರಾದ ವಕೀಲ ಅಬು ಸೋಹೆಲ್ ಅವರ ಮನವಿಯು ನಿರುಪದ್ರವವೆಂದು ತೋರುತ್ತದೆ ಆದರೆ ದೂರಗಾಮಿ ಪರಿಣಾಮಗಳನ್ನ ಹೊಂದಿದೆ ಎಂದು ಹೇಳಿದರು. ನಂತರ ಸೊಹೆಲ್ ತನ್ನ ಮನವಿಯನ್ನ ಹಿಂಪಡೆದಿದ್ದಾರೆ.
ದೂರು ನೀಡಿದರೂ ಪೊಲೀಸರು ನೂಪುರ್ ಶರ್ಮಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ವಕೀಲರು ಪ್ರಕರಣದ ತುರ್ತು ವಿಚಾರಣೆಯನ್ನ ಕೋರಿದ್ದರು.
ಪ್ರವಾದಿ ಮೊಹಮ್ಮದ್ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಶರ್ಮಾ ಅಸಭ್ಯ ಟೀಕೆಗಳನ್ನು ಮಾಡಿದ್ದಾರೆ ಮತ್ತು ಆದ್ದರಿಂದ ಘಟನೆಯ ಬಗ್ಗೆ “ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ” ಗಾಗಿ ನಿರ್ದೇಶನಗಳನ್ನು ಕೋರಿದ್ದಾರೆ, ಅದು ಅವರ ತಕ್ಷಣದ ಬಂಧನವನ್ನು ಖಚಿತಪಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶರ್ಮಾ ಅವರ ಹೇಳಿಕೆಗಳು ಸಂವಿಧಾನದ 14, 15, 21, 26 ಮತ್ತು 29 ನೇ ವಿಧಿ ಮತ್ತು ಇತರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿ ಶರ್ಮಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.
“ಶರ್ಮಾ ಅವರ ಅನಪೇಕ್ಷಿತ ಮಾತುಗಳು ದೇಶ ಮತ್ತು ಜಗತ್ತಿನಾದ್ಯಂತ ಭಾರಿ ಅಶಾಂತಿ ಮತ್ತು ಕೋಲಾಹಲವನ್ನು ಉಂಟುಮಾಡಿದೆ ಮತ್ತು ನಮ್ಮ ಮಹಾನ್ ರಾಷ್ಟ್ರದ ಪ್ರತಿಷ್ಠೆಯನ್ನು ಹಾಳುಮಾಡಿದೆ” ಎಂದು ವಕೀಲರು ಹೇಳಿದರು.